ರಾಜ್ಯದಲ್ಲಿ ಹಿಂದುಗಳ ದಮನ ನೀತಿ

CTD 1 VHP 2--03
Published on

ಕಾಂಗ್ರೆಸ್ ವಿರುದ್ಧ ವಿಎಚ್‌ಪಿ ಆಕ್ರೋಶ ಡಿಸಿ ಮೂಲಕ ರಾಜ್ಯಪಾಲರಿಗೆ ವಿಶ್ವಹಿಂದು ಪರಿಷತ್ ಮನವಿ ರವಾನೆ
ಚಿತ್ರದುರ್ಗ: ರಾಜ್ಯದಲ್ಲಿ ನಡೆಯುತ್ತಿರುವ ದ್ವೇಷ, ತಾರತಮ್ಯದ ರಾಜಕಾರಣಕ್ಕೆ ಕಡಿವಾಣ ಹಾಕುವಂತೆ ರಾಜ್ಯಪಾಲರನ್ನು ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಕಾರ‌್ಯಕರ್ತರು ಚಿತ್ರದುರ್ಗದಲ್ಲಿ ಡಿಸಿ ಟಿ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.
ಹಿಂದು ಮುಖಂಡ ಶರಣ್ ಪಂಪುವೆಲ್ ಅವರ ವಿರುದ್ಧದ ಪ್ರಕರಣ ಹಿಂಪಡೆಯಬೇಕೆಂದು ಆಗ್ರಹಿಸಿದ ಕಾರ್ಯಕರ್ತರು, ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದುಗಳನ್ನು ಗುರಿಯಾಗಿಸಿ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂದು ದೂರಿದರು.
ಮಂಗಳೂರಿನ ಕಂಕನಾಡಿ ಬಳಿ ಅನುಮತಿ ರಹಿತವಾಗಿ ರಸ್ತೆಯಲ್ಲಿ ಪ್ರಾರ್ಥನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಬಿ.ರಿಪೋರ್ಟ್‌ನ್ನು ಹಾಗೂ ಪ್ರಕರಣದಲ್ಲಿ ಮಾಡಿರುವ ಪೊಲೀಸ್ ಅಧಿಕಾರಿ ಅಮಾನತು ರದ್ದುಪಡಿಸ ಬೇಕೆಂದರು ಆಗ್ರಹಿಸಿದರು.
ಪ್ರಮುಖರಾದ ಚನ್ನಕೇಶವ, ಡೈರಿ ಸೀನಣ್ಣ, ಶ್ರೀನಿವಾಸ್, ದೀಪಕ್‌ರಾಜ್, ಸುರೇಶ್, ಪ್ರದೀಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net