ರಾಜ್ಯದಲ್ಲಿ ಬೆಲೆ ಏರಿಕೆಯ ಯುಗ ಆರಂಭ

Bjp (5)
Published on

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಅಧಿಕಾರಕ್ಕೆ ಬಂದರು. ಆದರೆ ಇದೀಗ ವಿದ್ಯುತ್, ನೋಂದಣಿ, ಹಾಲು, ಪೆಟ್ರೋಲ್, ಡೀಸೆಲ್, ಬಸ್ ದರ, ದಿನಸಿ ಸೇರಿ ಎಲ್ಲ ಬೆಲೆಗಳನ್ನು ಹೆಚ್ಚಿಸುತ್ತಿದ್ದು, ಸಿಎಂ ಬೆಲೆ ಏರಿಕೆಯ ಯುಗ ಆರಂಭಿಸಿದ್ದಾರೆ ಎಂದು ಪ್ರತಿ ಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ನಗರದಲ್ಲಿ ಬಿಜೆಪಿಯಿಂದ ಗುರುವಾರ ಹಮ್ಮಿಕೊಂಡ ಪ್ರತಿಭಟನೆಯನ್ನು ಉz್ದÉÃಶಿಸಿ ಮಾತನಾಡಿ, ರಾಜ್ಯ ಸರ್ಕಾರದಲ್ಲಿ ಸಂಬಳ ನೀಡಲು ಹಣವಿಲ್ಲ. ಜನರಿಗೆ ತೆರಿಗೆ ಹಾಕಿ ಮೋಸ ಮಾಡುತ್ತಿದ್ದಾರೆ. ಸಮರ್ಥ ಹಣಕಾಸು ಸಚಿವ ಆಗಿದ್ದರೆ ಎಲ್ಲವನ್ನು ನಿಭಾಯಿಸಬೇಕಿತ್ತು. ಆದರೆ ೮೦ ಸಾವಿರ ಕೋಟಿ ಹಣವನ್ನು ಉಚಿತ ಗ್ಯಾರಂಟಿಗಾಗಿ ಮೀಸಲಿಟ್ಟಿದ್ದಾರೆ. ತೈಲ ಬೆಲೆ ಹೆಚ್ಚಿಸಿ, ಏನು ಮಾಡುತ್ತಾರೆ ತಿಳಿಸಬೇಕು? ಸಿದ್ದರಾಮಯ್ಯಗೆ ಅರವತ್ತು ದಾಟ್ಟಿದ್ದು, ಅರಳು, ಮರಳು ಹಿಡಿದಿದೆ ಎಂದು ಕಿಡಿ ಕಾರಿದರು.
ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರೇ ದಂಗೆ ಏಳುತ್ತಿದ್ದಾರೆ. ಸಿದ್ದರಾಮಯ್ಯ ನಿದ್ದೆರಾಮಯ್ಯ ಆಗಿದ್ದಾರೆ. ಮಾನಗೆಟ್ಟ ಕೆಲಸ ಮಾಡುತ್ತಿದ್ದಾರೆ. ಫಾರೆನ್ ವಿಸ್ಕಿಗೆ ಕಡಿಮೆ ಬೆಲೆ, ದೇಶಿ ವಿಸ್ಕಿಗೆ ಹೆಚ್ಚಿನ ಬೆಲೆ ಮಾಡಿದ್ದಾರೆ. ಊಟ, ಬದುಕಲು ಕಷ್ಟ ಪಡುವಂತೆ ಮಾಡಿದ್ದಾರೆ. ಬೆಲೆ ಏರಿಕೆ ಮಾಡಿ ಉಚಿತ ಕೊಡಲು ೧೫ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಬೇಕಿಲ್ಲ ಎಂದರು.
ಮಾತೆತ್ತಿದರೆ ಎರಡು ಸಾವಿರ ಕೋಟಿ ಅಂತಾರೆ. ಐದು ಸಾವಿರ ರೂ. ಜನರ ಕಿಸೆಯಿಂದ ಕಿತ್ತಿದ್ದಾರೆ. ಇಡೀ ಸಚಿವ ಸಂಪುಟ ಅಲಿಬಾಬಾ ೪೦ ಕಳ್ಳರಂತಾಗಿದೆ. ಈ ಬಗ್ಗೆ ಹೋರಾಟ ನಿರಂತರವಾಗಿ ಇರಲಿದೆ. ವಿಧಾನಸೌಧದಲ್ಲೂ ಧ್ವನಿ ಎತ್ತಿ ರಾಜ್ಯದ ಜನರಿಗೆ ನ್ಯಾಯ ಕೊಡಿಸುತ್ತೇವೆ. ದರ ಇಳಿಸುವವರೆಗೆ ಬಿಡುವುದಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net