

ಯಾದಗಿರಿ: ದೇಶದ ಸರ್ವಾಂಗಿಣ ಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದಿದ್ದು, ಇಂತಹ ಪ್ರಧಾನಿ ದೊರೆತಿದ್ದು ನಮ್ಮೆಲ್ಲರ ಸೌಭಾಗ್ಯ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದರು.
ಸುರಪುರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಕನರ್ಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ 195.85 ಕೋಟಿ ರೂ. ವೆಚ್ಚದಲ್ಲಿ ನಿರಂತರ 24ಷ7 ನೀರು ಸರಬರಾಜು ಯೋಜನೆ ಉದ್ಘಾಟನೆ ಹಾಗೂ ಕೃಷ್ಣಾ ಭಾಗ್ಯ ಜಲನಿಗಮದಿಂದ 127 ಕೋಟಿ ರೂ. ವೆಚ್ಚದಲ್ಲಿ ದೇವತ್ಕಲ್-ಏದಲಭಾವಿ, ಭೈರಿಮಡ್ಡಿ, ಕೆ.ತಳ್ಳಳ್ಳಿ ಏತ ನೀರಾವರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ಅಗತ್ಯವಿರುವ ಕುಡಿಯುವ ನೀರು ಮನೆಗೆ ಮನೆಗೆ ತಲುಪಿಸಲಾಗಿದೆ. ಶಾಸಕ ನರಸಿಂಹ ನಾಯಕ (ರಾಜುಗೌಡ) ಅಭಿವೃದ್ಧಿ ಪರ ಇರುವ ನಾಯಕ. ಇಂತಹವರಿಗೆ ಸುರಪುರ ಜನತೆ ಮತ್ತೊಮ್ಮೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಕಲ್ಯಾಣ ಕನರ್ಾಟಕದ ಎಲ್ಲ ಜಿಲ್ಲೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಕೇಂದ್ರ ಮತ್ತು ರಾಜ್ಯ ಸಕರ್ಾರದಿಂದ 9500 ಕೋಟಿ ರೂ. ಮೀಸಲಿಟ್ಟಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಅಕಾರಕ್ಕೆ ಬರುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ನರಸಿಂಹ ನಾಯಕ ಪ್ರಾಸ್ತಾವಿಕ ಮಾತನಾಡಿ, ಸುರಪುರದ 31 ವಾಡರ್್ಗಳ 11 ಸಾವಿರ ಮನೆಗಳಿಗೆ ನಿರಂತರ ನೀರು ಸರಬರಾಜು ಪೂರೈಕೆ ಯೋಜನೆ ಮೂಲಕ ಇಂದು ನನ್ನ ಕನಸು ಸಾಕಾರಗೊಂಡಿದೆ. ಈ ಯೋಜನೆ ರಾಜ್ಯದಲ್ಲೇ ಮಾದರಿಯಾಗಿದೆ. ಸ್ಕಾಡಾ ತಂತ್ರಜ್ಞಾನ ಬಳಸಿದ್ದು, ತಿಂಗಳಿಗೆ ಕೇವಲ 56 ರೂ. ಖಚರ್ು ಮಾಡಿದರೆ ಸಾಕು ಶುದ್ಧ ನೀರು ಸಿಗಲಿದೆ ಎಂದು ತಿಳಿಸಿದರು.
ಒಂದು ಕಾಲಕ್ಕೆ ಸುರಪುರಕ್ಕೆ ಹೆಣ್ಣು ಕೊಡಬೇಕಾದರೆ ಪಾಲಕರು ಯೋಚಿಸುವಂಥ ಸ್ಥಿತಿ ಇತ್ತು. ಕಾರಣ ಕುಡಿಯುವ ನೀರಿನ ಸಮಸ್ಯೆ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿತ್ತು. ಆದರೀಗ ನಿರಂತರ ನೀರಿನ ಮೂಲಕ ಈ ಸಮಸ್ಯೆ ಶಾಶ್ವತವಾಗಿ ಬಗೆಹರಿದಂತಾಗಿದೆ. ರಾಜ್ಯದ ಇತರೆ ನಗರಗಳಿಗೆ ಯೋಜನೆ ಜಾರಿಗೆ ಮುನ್ನ ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಇನ್ನು ದೇವತ್ಕಲ್-ಏದಲಭಾವಿ ಏತ ನೀರಾವರಿ ಯೋಜನೆಯಡಿ 56,355 ಎಕರೆಗೆ ನೀರು ಸಿಗುವ ಮೂಲಕ ಲಕ್ಷಾಂತರ ರೈತರ ಬಾಳು ಹಸನಾಗಲಿದೆ ಎಂದರು.
ನಗರಸಭೆ ಅಧ್ಯಕ್ಷೆ ಸುಜಾತಾ ಜೇವಗರ್ಿ, ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ), ಪ್ರಮುಖರಾದ ಬಸನಗೌಡ ಯಡಿಯಾಪುರ, ಯಲ್ಲಪ್ಪ ಕುರಕುಂದಿ, ಮರಿಲಿಂಗಪ್ಪ ಕನರ್ಾಳ, ಸುರೇಶ ಸಜ್ಜನ್, ದೊಡ್ಡ ದೇಸಾಯಿ, ಸೋಮನಾಥ ನಾಯಕ, ಡಾ.ಎಸ್.ಪಿ. ದಯಾನಂದ, ಎಚ್.ಸಿ. ಪಾಟೀಲ್, ಮಾನಪ್ಪ ಸಾಹುಕಾರ, ಬಿಜೆಪಿ ಮಂಡಲ ಅಧ್ಯಕ್ಷ ಮೇಲಪ್ಪ ಗುಳಗಿ, ನಗರ ಯೋಜನಾ ಪ್ರಾಕಾರದ ಅಧ್ಯಕ್ಷ ಪ್ರಕಾಶ ಸಜ್ಜನ್ ಇದ್ದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಣೆ ಮಾಡಿದರು.