ರಾಜ್ಯದಲ್ಲಿ ದಲಿತರಿಗಿಲ್ಲ ರಕ್ಷಣೆ

22 YDG Rakesh
Published on

ಕಲಬುರಗಿ: ಯಾದಗಿರಿಯಲ್ಲಿ ರೊಟ್ಟಿ ಕೇಳಲು ಹೋಗಿದ್ದ ಮಾದಿಗ ಸಮಾಜದ ಯುವಕ ರಾಕೇಶನನ್ನು ಫಯಾಜ್ ಎಂಬಾAತ ಕೊಲೆ ಮಾಡಿದ್ದಾನೆ. ಇಂತಹ ಘಟನೆಗಳು ರಾಜ್ಯದಲ್ಲಿ ಪದೇ ಪದೆ ನಡೆಯುತ್ತಿದ್ದು ರಾಜ್ಯದಲ್ಲಿ ದಲಿತರಿಗೂ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಮಾದಿಗ ಸಮಾಜದ ಮುಖಂಡ ರಾಜು ವಾಡೇಕರ್ ಆರೋಪಿಸಿದರು.
ದಲಿತ ಕೊಲೆಯಾದರೂ ರಕ್ಷಣೆ ಮಾಡುತ್ತಿಲ್ಲ. ದಲಿತ ನಾಯಕರು ಎನ್ನುವ ಸಚಿವ ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ ಖರ್ಗೆ ಒಂದು ಮಾತನಾಡುತ್ತಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಅಂಬಾರಾಯ ಚಲಗೇರಾ ಮಾತನಾಡಿ, ಕೊಲೆಗೀಡಾಗಿರುವ ಯುವಕನ ಕುಟುಂಬಕ್ಕೆ ಸರ್ಕಾರದಿಂದ ೫೦ ಲಕ್ಷ ರೂ. ಪರಿಹಾರ ಧನ ನೀಡಬೇಕು, ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಒದಗಿಸಬೇಕು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ರಾಷ್ಟçಪತಿ ಆಡಳಿತ ಹೇರಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಯಾರಿಗೂ ರಕ್ಷಣೆಯೇ ಇಲ್ಲದಂತಾಗಿದೆ. ಸರ್ಕಾರ ಶಾಂತಿ, ಸುವ್ಯವಸ್ಥೆಯನ್ನೇ ಮರೆತಿದೆ. ಕೂಡಲೇ ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಅನೀಲ ಡೊಂಗರಗಾAವ, ಮನೋಹರ ಬೀರನೂರ, ಸಂತೋಷ ಹಾದಿಮನಿ, ಚಿತ್ರಶೇಖರ ಹಾಗರಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net