ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸಿಗಲಿ ಒತ್ತು

CTD HDK-JDS-------------
Published on

ಚಿತ್ರದುರ್ಗ: ಕೈಗಾರಿಕೆಗಳ ಸ್ಥಾಪನೆಗೆ ಒತ್ತು ಕೊಡುವ ಮೂಲಕ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ ಕೇಂದ್ರ ಕೈಗಾರಿಕೆ ಸಚಿವ ಎಚ್.ಡಿ.ಕುಮಾರ ಸ್ವಾಮಿ ಮುಂದಾಗಲಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯಣ್ಣ ಹೇಳಿದರು. ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಕುಮಾರಸ್ವಾಮಿ ಅ ವರ ಜನ್ಮದಿನಾಚರಣೆಯಲ್ಲಿ ಮಾತನಾಡಿ,ದೇಶದ ಕಾರ್ಮಿಕರ ಸಮಸ್ಯೆಗಳನ್ನು ಹಾಗೂ ರಾಜ್ಯದಲ್ಲಿ ನಿರುದ್ಯೋಗ ನಿವಾರಣೆಗೆ ಕುಮಾರ ಸ್ವಾಮಿ ಆದ್ಯತೆ ಕೊಡಬೇಕಿದೆ,ಅವರು ಮತ್ತೆ ಕರ್ನಾಟಕದ ಸಿಎಂ ಆಗಿ ನಾಡಿನ ಸಮಸ್ಯೆಗಳನ್ನು ನಿವಾರಿಸಲಿ ಎಂದು ಆಶಿಸಿದರು.

ಜೆಡಿಎಸ್ ರಾಜ್ಯಪ್ರಧಾನ ಕಾರ‌್ಯದರ್ಶಿ ಬಿ.ಕಾಂತರಾಜ್ ಮಾತನಾಡಿ,ಕುಮಾರಸ್ವಾಮಿ ಅವರ ಜನ್ಮ ದಿನದ ಅಂಗವಾಗಿ ಶ್ರೀ ನೀಲ ಕಂಠೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಪಕ್ಷದ ಸಿದ್ಧಾಂತದಡಿ ಮುಂದೆ ನಡೆಯುವ ಎಲ್ಲ ಚುನಾವಣೆಗಳನ್ನು ಎದುರಿಸಲಾಗುವುದು ಎಂದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಸ್ರಲ್ಲಾ,ಸದಸ್ಯ ಚಂದ್ರಶೇಖರ್,ಜಿ.ಬಿ.ಶೇಖರ್,ಗೋಪಾಲಸ್ವಾಮಿನಾಯಕ್,ಸಣ್ಣತಿಮ್ಮಣ್ಣ,ಲಲಿತಾ ಕೃಷ್ಣಮೂರ್ತಿ,ಗೀತಮ್ಮ,ಪರಮೇಶ್ವರಪ್ಪ,ರುದ್ರಣ್ಣ ಜಾಲಿಕಟ್ಟೆ,ಮಂಜುನಾಥ,ಪ್ರತಾಪ್‌ಜೋಗಿ,ಅಬು,ಹನುಮಂತಪ್ಪ,ಚಿದಾನಂದ,ಪುಟ್ಟ ಮತ್ತಿತರರು ಇದ್ದರು.

ಚಿತ್ರದುರ್ಗದಲ್ಲಿ ಸೋಮವಾರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ದಿನವನ್ನು ಆಚರಿಸಲಾಯಿತು. ಎಂ.ಜಯಣ್ಣ,ಬಿ. ಕಾಂತರಾಜ್,ಗೋಪಾಲಸ್ವಾಮಿ ನಾಯಕ್,ಚಂದ್ರಶೇಖರ್,ಜಿ.ಬಿ.ಶೇಖರ್,ಪ್ರತಾಪ್‌ಜೋಗಿ,ಗೀತಮ್ಮ ಇತರರು ಇದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net