ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭ

8Athanigrameen3
Published on

ಅಥಣಿ ಗ್ರಾಮೀಣ: ರಾಜ್ಯ ಸರ್ಕಾರ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡುವ ಜತೆಗೆ ರಸ್ತೆ, ಶಿಕ್ಷಣ, ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಸಾಕಾರವಾಗಿ ಸರ್ವಜನಾಂಗದ ಶಾಂತಿಯ ತೋಟ ನಿರ್ಮಾಣವಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ೩೦ ಕೋಟಿ ರೂ. ವೆಚ್ಚದಲ್ಲಿ ಕೊಕಟನೂರ-ಸಾವಳಗಿ, ಅಥಣಿ-ಮದಭಾವಿ ಜಿಲ್ಲಾ ಗಡಿ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಅಥಣಿ ಕ್ಷೇತ್ರದ ರಸ್ತೆ ಸುಧಾರಣೆಗೆಂದು ಸರ್ಕಾರದಿಂದ ೫೭ ಕೋಟಿ ರೂ. ಹಣ ಮಂಜೂರಾಗಿದೆ. ಅದರಲ್ಲಿ ಅಥಣಿ-ಸತ್ತಿ ರಸ್ತೆಗೆ ೬ ಕೋಟಿ ರೂ., ಶಿರಹಟ್ಟಿ-ನಂದಗಾಂವ ರಸ್ತೆಗೆ ೫ ಕೋಟಿ ರೂ., ಅಥಣಿ-ತಂಗಡಿ ಕೇಂದ್ರೀಯ ವಿದ್ಯಾಲಯ ವರೆಗಿನ ರಸ್ತೆಗೆ ೯ ಕೋಟಿ ರೂ., ಅಥಣಿ-ಜನವಾಡ ರಸ್ತೆಗೆ ೨ ಕೋಟಿ ರೂ., ಮಹಿಷವಾಡಗಿ-ನದಿ ರಸ್ತೆಗೆ ೧ ಕೋಟಿ ರೂ., ಸವದಿದರ್ಗಾಗೆ ೨ ಕೋಟಿ ರೂ., ಬಡಚಿಯಿಂದ-ಬುರ್ಲಟ್ಟಿ ರಸ್ತೆಗೆ ೧ ಕೋಟಿ ರೂ. ಸೇರಿ ಒಟ್ಟು ೫೭ ಕೋಟಿ ರೂ. ವೆಚ್ಚದಲ್ಲಿ ಪಿಡಬ್ಲುಡಿ ಇಲಾಖೆಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಬಜೆಟ್‌ನಲ್ಲಿ ಅಥಣಿಗೆ ಕೃಷಿ ಮಹಾವಿದ್ಯಾಲಯಕ್ಕೆ ಅನುದಾನ ಹಾಗೂ ತಾಯಿ ಮತ್ತು ಬಾಣಂತಿಯರ ಆಸ್ಪತ್ರೆ ಘೋಷಿಸಿದ್ದ, ಅತ್ಯಂತ ಖುಷಿ ತಂದಿದೆ. ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕೈಗೊಂಡು ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

ಕೆಪಿಸಿಸಿ ಸದಸ್ಯ ಶಾಮರಾವ ಪೂಜಾರಿ ಮಾತನಾಡಿ, ಅಥಣಿ ಕ್ಷೇತ್ರದಲ್ಲಿ ನೀರಾವರಿ ಯೋಜನೆ, ರಸ್ತೆ, ಶಾಲಾ ಕೊಠಡಿ, ಸಮುದಾಯಭವನ, ಶುದ್ಧ ಕುಡಿಯುವ ನೀರು ಸೇರಿ ಅನೇಕ ಅಭಿವೃದ್ಧಿಯನ್ನು ಶಾಸಕ ಲಕ್ಷ್ಮಣ ಸವದಿ ಕೈಗೊಂಡಿರುವುದು ಶ್ಲಾಘನೀಯ ಎಂದರು.

ಗ್ರಾಪಂ ಅಧ್ಯಕ್ಷೆ ಶಾನವ್ವ ಪೂಜಾರಿ, ಮುಖಂಡರಾದ ಸುಭಾಷ ಸೋನಕರ, ಶೀತಲಗೌಡ ಪಾಟೀಲ, ಅರ್ಜುನ ಪೂಜಾರಿ, ಅನಿಲ ಮುಳಿಕ, ಸುರೇಶ ಪಾಟಣಕರ, ಮಾನಸಿಂಗ ಮಗರ, ಜಿಪಂ ಮಾಜಿ ಸದಸ್ಯ ಪ್ರಲ್ಹಾದ ಪೂಜಾರಿ, ಪಿಕೆಪಿಎಸ್ ಅಧ್ಯಕ್ಷ ಅಣ್ಣಪ್ಪ ಖೋತ, ಮಹೆಬೂಬ್ ತರಡೆ, ನರಸಗೊಂಡ ಚಿಪ್ಪರಗಿ, ಅಽಕಾರಿಗಳಾದ ಜಯಾನಂದ ಹಿರೇಮಠ, ಪ್ರವೀಣ ಸೂರ್ಯವಂಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net