

ಚಿತ್ರದುರ್ಗ: ರಸ್ತೆ ದುರಸ್ತಿಗೊಳಿಸದೆ ರಾಜ್ಯ ಸರ್ಕಾರ ನಿರ್ಲಕ್ಷೃ ವಹಿಸಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದ ಒನಕೆ ಓಬವ್ವ ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.
ರಾಜ್ಯದ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ರಾಜ್ಯದ ರಾಜದಾನಿಯನ್ನು ಗ್ರೇಟರ್ ಬೆಂಗಳೂರನ್ನಾಗಿ ಮಾಡಲು ಮುಂದಾಗಿರುವ ಸರ್ಕಾರಕ್ಕೆ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಯೋಗ್ಯತೆ ಇಲ್ಲವಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಕಿಡಿಕಾರಿದರು.
ಸಂಗ್ರಹವಾದ ತೆರಿಗೆ ಹಣವನ್ನು ಗ್ಯಾರಂಟಿಗಳಿಗೆ ಬಳಸುತ್ತಿರುವುದರಿಂದ ರಾಜ್ಯದಲ್ಲಿ ಅಭಿವೃದ್ಧಿ ನನೆಗುದಿಗೆ ಬಿದ್ದಿದೆ. ರಾಜ್ಯದ ಜನರಿಗೆ ಸರ್ಕಾರ ರಸ್ತೆ ಗುಂಡಿಗಳನ್ನು ಗ್ಯಾರಂಟಿಯಾಗಿ ಕೊಟ್ಟಿದೆ. ಬೊಕ್ಕಸ ಬರಿದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆಗಳಲ್ಲಿ ಗುಂಡಿಗಳಿರುವುದಿಂದ ಅಪಘಾತಗಳು ಹೆಚ್ಚುತ್ತಿವೆ. ವಾಹನ ಸವಾರರ ಸುರಕ್ಷತೆ ಕಡೆಗಣಿಸಿದೆ. ಕೂಡಲೇ ಗುಂಡಿಗಳನ್ನು ಮುಚ್ಚಲು ಕ್ರಮ ವಹಿಸುವಂತೆ ಒತ್ತಾಯಿಸಿದರು.
ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿಕಾರ್ಜುನ್, ಸಂಪತ್‌ಕುಮಾರ್, ಸುರೇಶ್‌ಸಿದ್ದಾಪುರ, ಮಾಧುರಿ ಗಿರೀಶ್, ಲೋಕೇಶ್, ಕೆ. ನಾಗರಾಜ್, ನಾಗರಾಜ್‌ಬೇದ್ರೆ,ನಗರಸಭೆ ಸದಸ್ಯ ಹರೀಶ್, ಮಾಜಿ ಸದಸ್ಯ ಗರಡಿಪ್ರಕಾಶ್, ಲಿಂಗರಾಜು, ಕವಿತಾಜವಳಿ, ಬಸಮ್ಮ, ಸುಮಕ್ಕ, ಅರುಣ್ ಯಾದವ್, ವೀಣಾ, ಶಾಂತಮ್ಮ, ಮಂಜುಳಮ್ಮ, ಶ್ರೀಧರ್, ಭಾರತಿ, ಮಹಾಂತೇಶ್‌ಯಾದವ್, ಸಿದ್ದೇಶ್, ಶಿವನಾಯಕ, ನವೀನ್, ಮಲ್ಲಿಕಾರ್ಜನ್, ವಿರೂಪಾಕ್ಷ, ಕವನ,ಪಲ್ಲವಿ, ಪ್ರಸನ್ನ, ಅಣ್ಣಪ್ಪ, ದೇವರಾಜ್, ವಸಂತ್‌ಆಚಾರ್ ಇತರರು ಇದ್ದರು.
ಸ್ವಚ್ಛತಾ ಕಾರ್ಯಕ್ರಮ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿರುವ ಸೇವಾ ಪಾಕ್ಷಿಕ ಅಭಿಯಾನದಡಿ ಬಿಜೆಪಿ ಚಿತ್ರದುರ್ಗ ಗ್ರಾಮಾಂತರ ಮಂಡಲದಿಂದ ಚಿತ್ರದುರ್ಗ ತಾಲೂಕಿನ ಗಂಜಿಗಟ್ಟೆ ಗ್ರಾಮದ ಬೆಟ್ಟದ ಮೇಲಿರುವ ಶ್ರೀ ಪಾಂಡುರಂಗನಾಥ ಸ್ವಾಮಿ ದೇವಸ್ಥಾನದ ಕಲ್ಯಾಣಿಯಲ್ಲಿ ಬುಧವಾರ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಮಂಡಲದ ಅಧ್ಯಕ್ಷ ಕೆ. ನಾಗರಾಜ್, ಸಚಿನ್, ಸಿದ್ದೇಶ್, ಆನಂದಪ್ಪ, ರಮೇಶ್ ಪಂಡರಹಳ್ಳಿ, ವಿನಯ ನಂದಿಪುರ, ರಾಘವೇಂದ್ರ ಗಂಜಿಗಟ್ಟೆ, ಪ್ರಾಣೇಶ್ ಇತರರು ಇದ್ದರು.