ರಾಜ್ಯದ ಬಹುಪಾಲು ಜನರು ಕೃಷಿ ಅವಲಂಬಿತ

08HDK02
ಎಚ್.ಡಿ. ಕೋಟೆ ತಾಲೂಕಿನ ಕೋಳಗಾಲ ಗ್ರಾಮದಲ್ಲಿ ಗುರುವಾರ ಪ್ರಧಾನ ಮಂತ್ರಿ ಕೃಷಿ ಸಿಂಚಾಯ್ ಯೋಜನೆಯಡಿ ಜಲಾನಯನ ಅಭಿವೃದ್ಧಿ ಇಲಾಖೆ ವತಿಯಿಂದ ಆದಾಯ ಉತ್ಪನ್ನ ಚಟುವಟಿಕೆ ಅಮೃತ ಮಳಿಗೆಯನ್ನು ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಉಪ ನಿರ್ದೇಶಕ ಯೋಗೀಶ್ ಉದ್ಘಾಟಿಸಿದರು. ಸಿದ್ದಪ್ಪಸ್ವಾಮಿ, ಎಚ್.ಆರ್. ರಾಜಶೇಖರ್, ಗಂಗಾನರಸಿಂಹಯ್ಯ, ಚಕ್ರವರ್ತಿ ಇತರರಿದ್ದರು.
Published on

ಎಚ್.ಡಿ.ಕೋಟೆ: ರಾಜ್ಯದ ಬಹುಪಾಲು ಜನರು ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ ಎಂದು ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಉಪ ನಿರ್ದೇಶಕ ಯೋಗೀಶ್ ತಿಳಿಸಿದರು.

ತಾಲೂಕಿನ ಕೋಳಗಾಲ ಗ್ರಾಮದಲ್ಲಿ ಗುರುವಾರ ಪ್ರಧಾನ ಮಂತ್ರಿ ಕೃಷಿ ಸಿಂಚಾಯ್ ಯೋಜನೆಯಡಿ ಜಲಾನಯನ ಅಭಿವೃದ್ಧಿ ಇಲಾಖೆ ವತಿಯಿಂದ ಆದಾಯ ಉತ್ಪನ್ನ ಚಟುವಟಿಕೆಯ ಅಮೃತ ಮಳಿಗೆ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯ ಸಮಸ್ಯೆಗಳು ಮತ್ತು ಅದರ ಪರಿಣಾಮಗಳು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಕೃಷಿ ಉತ್ಪಾದನಾ ವ್ಯವಸ್ಥೆಗಳು, ಸುಸ್ಥಿರ ಜೀವನೋಪಾಯಕ್ಕೆ ಗಂಭೀರ ಸವಾಲುಗಳನ್ನು ಒಡ್ಡಿವೆ ಎಂದರು.

ಜಲಾನಯನ ಅಭಿವೃದ್ಧಿ ವಿಧಾನವು ಮಣ್ಣು ಮತ್ತು ನೀರಿನ ಸಂರಕ್ಷಣೆಯ ಆರಂಭಿಕ ಉದ್ದೇಶಗಳಾಗಿವೆ. ಕ್ರಮೇಣವಾಗಿ ಕಾಲಾ ನಂತರದಲ್ಲಿ ವಿಕಸನಗೊಂಡು ನದಿ ಕಣಿವೆಯ ಯೋಜನೆಗಳ ಹೂಳು ತಗ್ಗಿಸುವಿಕೆಯಿಂದ ಜಲಾನಯನ ಪ್ರದೇಶದ ಜೈವಿಕ, ಭೌತಿಕ ಮತ್ತು ಸಾಮಾಜಿಕ ಅಂಶಗಳನ್ನು ನಿರ್ವಹಿಸುವ ಪ್ರಸ್ತುತ ಸಮಗ್ರ ವಿಧಾನವಾಗಿದೆ. ರೈತರು ಈ ಉದ್ದೇಶಗಳನ್ನು ಸಾಧಿಸಲು ಕೆಲಸ ಮಾಡಿದರೆ ಪ್ರಗತಿ ಕಾಣಬಹುದು ಎಂದರು.

ಕೃಷಿ ಅಧಿಕಾರಿ ಸಿದ್ದಪ್ಪಸ್ವಾಮಿ, ಡಿಎಟಿಸಿ ನಾಗನಹಳ್ಳಿ ಕೃಷಿ ಅಧಿಕಾರಿ ಎಚ್.ಆರ್. ರಾಜಶೇಖರ್, ಗಂಗಾನರಸಿಂಹಯ್ಯ, ಸ್ನೇಹ ಸೇವಾ ಸಂಸ್ಥೆ ಮುಖ್ಯಸ್ಥ ಚಕ್ರವರ್ತಿ ಎಸ್.ಜಿ., ತಂಡದ ನಾಯಕ ಶಿವರಾಜ್, ಆದಾಯ ಉತ್ಪನ್ನ ಚಟುವಟಿಕೆ ಪರಿಣಿತರಾದ ಮಂಜು ಮಾಗುಡಿಲು, ಯಶವಂತ ಮತ್ತು ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net