

ನರೇಂದ್ರ ಮೋದಿ ಪಕ್ಷಾತೀತ ಪ್ರಧಾನಿ ಕೇಂದ್ರ ಸಚಿವ ನಾರಾಯಣಸ್ವಾಮಿ ಅನಿಸಿಕೆ ಚಿಕ್ಕಬೆನ್ನೂರಲ್ಲಿ ಪಿಎಂ ವರ್ಚುವಲ್ ಭಾಷಣ ವೀಕ್ಷಣೆ
ಚಿತ್ರದುರ್ಗ: ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಕಾರ ಅಗತ್ಯವಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಕೇಂದ್ರದ ಯೋಜನೆಗಳೆಡೆ ಜನರಲ್ಲಿ ಅರಿವು ಮೂಡಿಸುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಂಗವಾಗಿ ಚಿತ್ರದುರ್ಗ ತಾಲೂಕು ಚಿಕ್ಕಬೆನ್ನೂರು ಸರ್ಕಾರಿ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚುವಲ್ ಭಾಷಣ ವೀಕ್ಷಣೆ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರದ ಅನೇಕ ಯೋಜನೆಗಳನ್ನು ಮನೆ, ಮನೆಗೆ ತಲುಪಿಸಬೇಕೆಂಬುದು ಯಾತ್ರೆ ಉದ್ದೇಶವಾಗಿದ್ದು, ಈ ಕಾರ‌್ಯಕ್ರಮ ರಾಜ್ಯದ ಸರ್ಕಾರದ ಜವಾಬ್ದಾರಿಯಾಗಿತ್ತು. ಆದರೆ, ರಾಜ್ಯದಲ್ಲಿರುವ ಕಾಂಗ್ರೆಸ್ಸಿನ ನಿರ್ಲಕ್ಷ್ಯದಿಂದ ಈ ಕಾರ್ಯಕ್ರಮವನ್ನು ಬ್ಯಾ ಂಕ್‌ನವರು ಆಯೋಜಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೋದಿಯವರು ಬಿಜೆಪಿಯಿಂದ ಗೆದ್ದು ಬಂದಿದ್ದರೂ, ಅವರು ಈ ದೇಶದ ಪಕ್ಷಾತೀತ ಪ್ರಧಾನಿ. ರಾಜ್ಯದಲ್ಲಿ ಹಲವು ತಿಂಗಳುಗಳಿಂದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಕೇಂದ್ರ ಸರಕಾರ ಒಂದೇ ಯೋಜನೆಗೆ ಜೋತು ಬಿದ್ದಿಲ್ಲ. ಒಂದು ಕಾರ‌್ಯಕ್ರಮ ಕೊಟ್ಟು ವೋಟು ಹಾಕಿ, ನಮಗೆ ಅಧಿಕಾರ ಕೊಡಿ ಎಂದು ಮೋದಿ ಅವರು ಹೇಳುವುದಿಲ್ಲ ಎಂದರು.
ದೇಶದಲ್ಲಿ ಕಳೆದ 9 ವರ್ಷಗಳಲ್ಲಿ 74 ವಿಮಾನ ನಿಲ್ದಾಣಗಳನ್ನು ಪ್ರಾರಂಭಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳು, ಐಐಟಿ, ಮೆಡಿಕಲ್ ಕಾ ಲೇಜುಗಳ ಸ್ಥಾಪನೆ ಮೊದಲಾದ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ಅನುಷ್ಠಾನ ಮಾಡುತ್ತಿದೆ ಎಂದು ಹೇಳಿದರು.
ಮೋದಿ ಅವರು ಪಿಎಂ ಕೃಷಿ ಸಮ್ಮಾನ್, ಫಸಲ್ ಬೀ ಮಾ, ಗೊಬ್ಬರ ಸಬ್ಸಿಡಿ, ಪ್ರತಿ ಮನೆಗೆ ಶೌಚಗೃಹ, ಪಿಎಂ ಆವಾಸ್, ಉಜ್ವಲ ಮೊದಲಾದ ರೈತ,ಬಡವರ ಪರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರತಿಜ್ಞೆ ಸ್ವೀಕರಿಸಲಾಯಿತು. ಕೇಂದ್ರದ ನಾನಾ ಯೋಜನೆಗಳ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಆದೇಶ ಪತ್ರ ವಿತರಿಸಲಾಯಿತು. ಆರೋಗ್ಯ ಇಲಾಖೆಯಿಂದ ಗ್ರಾಮದಲ್ಲಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.
ಗ್ರಾಪಂ ಅಧ್ಯಕ್ಷೆ ಮಂಜುಳಾ, ಬಳ್ಳಾರಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕಿ ಭಾಗ್ಯರೇಖಾ, ಬೆಂಗಳೂರು ದೂರದರ್ಶನದ ಕೇಂದ್ರದ ಡಿಡಿಜಿ ಮಾದವರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ಮುಖಂಡರಾದ ಕೋಗುಂಡೆ ಮಂಜುನಾಥಪ್ಪ, ತೀರ್ಥಪ್ಪ, ಶೈಲೇಶಪ್ಪ, ಚಿತ್ರದುರ್ಗ ಕೆನರಾ ಬ್ಯಾಂಕ್ ವ್ಯವಸ್ಥಾಪಕ ವೈ.ಎನ್.ಶಿವಪ್ರಸಾದ್, ಪ್ರಾದೇಶಿಕ ವ್ಯವಸ್ಥಾಪಕ ಹರಿಪ್ರಸಾದ್, ಲೀಡ್‌ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ತಿಪ್ಪೇಶ್ ಇತರರು ಇದ್ದರು.