ರಾಜ್ಯಗಳ ಬೇಡಿಕೆಗೆ ಬಿಜೆಪಿ ಬಳಿ ಉತ್ತರವಿಲ್ಲ ಎಂದ ಮಲ್ಲಿಕಾರ್ಜುನ ಖರ್ಗೆ

Mallikarjun Kharge
Published on

ಕಲಬುರಗಿ: ಮಹಾರಾಷ್ಟç ಮತ್ತು ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ಪರ ಉತ್ತಮ ವಾತಾವರಣವಿದೆ. ಬಿಜೆಪಿಗರು ಲೋಕಸಭೆ ಚುನಾವಣೆ ಮಾದರಿ ವಿಧಾನ ಸಭೆ ಚುನಾವಣೆ ಮಾಡುತ್ತಿದ್ದು, ಜನರು ನಮಗೇನು ಕೊಡುತ್ತೀರಿ ಎಂದು ಪ್ರಶ್ನಿಸುತ್ತಿದ್ದು, ಅದಕ್ಕೆ ಬಿಜೆಪಿಗರ ಬಳಿ ಉತ್ತರವಿಲ್ಲ ಎಂದು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಗರು ೩೭೦ನೇ ವಿಧಿ ಬಗ್ಗೆ ಪದೇ ಪದೆ ಹೇಳುತ್ತಿದ್ದಾರೆ. ಜನರ ಬೇಡಿಕೆಗಳ ಬಗ್ಗೆ ಮಾತನಾಡುತ್ತಿಲ್ಲ. ಜನರು ಮೂಲ ಸೌಲಭ್ಯ, ಕೃಷಿ, ಬೆಂಬಲ ಬೆಲೆಗಾಗಿ ಏನು ಮಾಡುತ್ತಾರೆ ಎಂಬುದಕ್ಕೆ ಕೇಂದ್ರ ಸರ್ಕಾರದ ಬಳಿ ಉತ್ತರವಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ನಿAದ ಮಹಿಳೆಯರಿಗೆ, ಪದವೀಧರರಿಗೆ ಧನಸಹಾಯ, ಉಚಿತ ಬಸ್, ಬೆಂಬಲ ಬೆಲೆ (ಎಂಎಸ್‌ಪಿ) ಜಾರಿ ಮಾಡುವುದು ಸೇರಿ ಐದು ಗ್ಯಾರಂಟಿಯನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಕರ್ನಾಟಕ ಮಾದರಿಯಲ್ಲಿ ಐದು ಗ್ಯಾರೆಂಟಿ ನೀಡಲಾಗಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿ ಮಾಡಲಾಗುವುದು ಎಂದರು.

ಅದಾನಿಯಿAದ ಪ್ರತಿಗಾಮಿ ಸರ್ಕಾರ: ಉದ್ಯಮಿ ಅದಾನಿ ರಾಜಕಾರಣದಲ್ಲಿ ಕೈ ಹಾಕಿದ್ದು, ದೇಶವನ್ನು ಲೂಟಿ ಮಾಡುತ್ತಿದ್ದಾನೆ. ರಿಯಾಕ್ಷನರಿ ಸರ್ಕಾರಗಳಿಗೆ ಬೆಂಬಲ ನೀಡುತ್ತಿದ್ದಾನೆ. ಪ್ರತಿಗಾಮಿ ಸರ್ಕಾರಗಳಿಗೆ ಬೆಂಬಲ ನೀಡುತ್ತಿದ್ದಾನೆ. ದೇಶದ ಸಿದ್ಧಾಂತಗಳಿಗೆ ಬೆಂಬಲ ನೀಡದೆ, ದ್ವೇಷ ಭಾಷಣ ಮಾಡುವ, ಕೋಮುವಾದಿಗಳಿಗೆ ಬೆಂಬಲಿಸುತ್ತಿದ್ದಾನೆ ಎಂದು ಹೇಳಿದರು.

ಮೋದಿ, ಶಾ ಕ್ರೋನಿ ಕ್ಯಾಪಿಟಲಿಸಂಗೆ ಬೆಂಬಲಿಸಿ, ಅವರಿಂದ ಹಣ ಪಡೆದು ಚುನಾವಣೆ ಮಾಡುತ್ತಿದ್ದಾರೆ. ಸಂಪತ್ತು ಇದ್ದವರನ್ನೇ ಬೆಳೆಸುತ್ತಿದ್ದಾರೆ. ತುಂಬಾ ಆಳವಾಗಿ ಬೆಂಬಲ ಪಡೆಯುತ್ತಿದ್ದು, ಅದಕ್ಕೆ ಸಾಕ್ಷಿ ಉದ್ಯಮಿಗಳಿಂದ ಚುನಾವಣೆ ಬಾಂಡ್ ಪಡೆದ ಬಿಜೆಪಿಯ ಹಗರಣ. ಶ್ರೀಮಂತರನ್ನು ಬೆಳೆಸದೆ ಸಣ್ಣ, ಮಧ್ಯಮ ಕೈಗಾರಿಕೆಗಳು, ಉದ್ಯಮಗಳನ್ನು ಸ್ಥಾಪಿಸಬೇಕು. ಆಗ ಬಡವರಿಗೆ ಅನುಕೂಲ ಆಗುತ್ತದೆ. ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಹೇಳಿದರು.

ಶಾಸಕ ಅಲ್ಲಮಪ್ರಭು ಪಾಟೀಲ್, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net