ರಾಜ್ಯಕ್ಕೆ ಎಸ್.ಬಂಗಾರಪ್ಪ ಕೊಡುಗೆ ಅಪಾರ

4-ANP-P1
Published on

ಆನಂದಪುರ: ರಾಜ್ಯದ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಕೊಡುಗೆ ಅಪಾರ. ಜನಪರ ಕಾರ್ಯಕ್ರಮಗಳನ್ನು ಅವರ ಅಧಿಕಾರ ಅವಧಿಯಲ್ಲಿ ಜಾರಿಗೊಳಿಸಿದ್ದರು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿ, ಬಂಗಾರಪ್ಪ ಅವರು ರೈತರಿಗೆ ಉಚಿತ ವಿದ್ಯುತ್, ಆಶ್ರಯ ಯೋಜನೆ ಸೇರಿ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರು ಎಂದು ತಿಳಿಸಿದರು.
ಚಲನಚಿತ್ರ ನಟ ದುನಿಯಾ ವಿಜಯ್, ಪ್ರಮುಖರಾದ ಅನಿತಾಕುಮಾರಿ, ಸೋಮಶೇಖರ ಲಾವಿಗ್ಗೆರೆ, ಚೇತನ್‌ರಾಜ್ ಕಣ್ಣೂರು, ಉಮೇಶ, ರವಿಕುಮಾರ್ ಯಡೇಹಳ್ಳಿ, ರಮಾನಂದ ಸಾಗರ್, ರಾಜು ದೇವಾಡಿಗ, ಆನಂದ ಹರಟೆ, ಖಲೀಮುಲ್ಲಾ, ರಾಜಶೇಖರ ಖೈರಾ, ಗಜೇಂದ್ರ ಯಾದವ್, ಬಾಬುಲ್ ಸಾಬ್, ಲೋಕೇಶ ಐಗಿನಬೈಲು ಇದ್ದರು. ಇದಕ್ಕೂ ಮುನ್ನ ಚಲನಚಿತ್ರ ನಟರಿಂದ ರೋಡ್ ಷೋ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಬೈಕ್ ರ‌್ಯಾಲಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net