

ದೋರನಹಳ್ಳಿ: ಯಾದಗಿರಿ-ಶಹಾಪುರ ಹೆದ್ದಾರಿ ಗುಂಡಿಗೆ ಇನ್ನೂ ತಪ್ಪದ ನರಕಯಾತನೆ. ಕಾಟಾಚಾರಕ್ಕೆ ಹೆದ್ದಾರಿ ಗುಂಡಿ ಮುಚ್ಚಿದ್ದರೂ ಅದು ಮತ್ತಷ್ಟು ಜೀವ ಕಂಟಕವಾಗುತ್ತಿದ್ದು, ಹೆದ್ದಾರಿಗೆ ದುರಸ್ತಿ ಭಾಗ್ಯ ಯಾವಾಗ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಮತ್ತೆ ಕಾಡಲಾರಂಭಿಸಿದೆ.
ಮಹಾತ್ವಾಕಾAಕ್ಷಿ ಜಿಲ್ಲೆ ಯಾದಗಿರಿ ರಾಜ್ಯದಲ್ಲೆ ಪುಟ್ಟ ಜಿಲ್ಲೆ. ಆದರೆ ಇಲ್ಲಿನ ಸಮಸ್ಯೆ ಮಾತ್ರ ದೊಡ್ಡದಾಗಿ ಪರಿಣಮಿಸಿದೆ. ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಸಂರ್ಪಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿ ಇದಾಗಿದೆ. ಜೀವಕ್ಕೆ ಕಂಟಕವಾದ ಯಾದಗಿರಿ-ಶಹಾಪುರ ಹೆದ್ದಾರಿ ಎಂಬ ಶಿರ್ಷಿಕೆಯಡಿ ವಿಸೃತ ವರದಿ ಮಾಡಲಾಗಿತ್ತು. ಇದನ್ನು ಮನಗಂಡ ಅಧಿಕಾರಿಗಳು ಬೇಕು ಬೇಡ ಎಂಬAತೆ ಆ.೩೧ರಂದು ಯಾದಗಿರಿಯಿಂದ ಶಹಾಪುರವರೆಗೆ ಇರುವ ಗುಂಡಿಯನ್ನು ತಾತ್ಕಾಲಿಕವಾಗಿ ಕಂಕರ್‌ನಿAದ ಮುಚ್ಚುವ ಪ್ರಯತ್ನ ಮಾಡಿದೆ. ಆದರೆ ಇವು ಮತ್ತೆ ಜೀವ ಬಲಿಗಾಗಿ ಬಾಯ್ತೆರೆದು ವಾಹನ ಸವಾರರಿಗೆ ಕಂಟಕವಾಗಿ ಕಾಡುತ್ತಿದೆ.
ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಸೇರಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ರಸ್ತೆ ಮಾರ್ಗದಲ್ಲಿಯೇ ಓಡಾಡುತ್ತಾರೆ. ಆದರೂ ಈ ರಸ್ತೆ ಇಷ್ಟು ನಿರ್ಲಕ್ಷö್ಯಕ್ಕೆ ಒಳಗಾಗಿರುವುದು ನಿಜಕ್ಕೂ ದುರಂತದ ಸಂಗತಿ. ಈ ರಸ್ತೆ ಗುಂಡಿಗಳಿAದ ದೊಡ್ಡ ಅಪಘಾತ ಅಥವಾ ಜೀವಹಾನಿ ಆಗುವ ಮೊದಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಲ್ಳಬೇಕು. ಹಾಗೊಂದು ವೇಳೆ ಎಚ್ಚರಗೊಳ್ಳದಿದ್ದರೆ ಮುಂದಾಗುವ ಅನಾಹುತಕ್ಕೆ ನೇರವಾಗಿ ಹೊಣೆಯಾಗಬೇಕಾಗುತ್ತದೆ.