

ರಾಯಚೂರು: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ರೈತ ವಿರೋ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಬಿಜೆಪಿ ರೈತ ಮೋರ್ಚಾದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಮಹ್ಮದ್ ಆಸ್ೀಗೆ ಮನವಿ ಸಲ್ಲಿಸಿ, ಬಿಜೆಪಿ ಸರ್ಕಾರದ ಅವಯಲ್ಲಿ ರೈತರ ಅನುಕೂಲಕ್ಕಾಗಿ ಜಾರಿಗೊಂಡ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ರದ್ದುಗೊಳಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಪೂರ್ವಾಪರ ಯೋಚಿಸದೆ ರದ್ದುಗೊಳಿಸಲಾಗಿದೆ. 100 ಕೋಟಿ ರೂ. ಅನುದಾನದಲ್ಲಿ ರ್ತು ಉತ್ತೇಜನಕ್ಕೆ ನೀಡುತ್ತಿದ್ದ ಅನುದಾನವನ್ನು ರದ್ದುಗೊಳಿಸಲಾಗಿದೆ. ಮೀನುಗಾರರ ವಸತಿ ಯೋಜನೆ ಕೈಬಿಟ್ಟು ರೈತ ಉತ್ಪಾದಕ ಸಂಸ್ಥೆ ಸ್ಥಾಪನೆ ನಿಲ್ಲಿಸಿರುವುದು ಕಾಂಗ್ರೆಸ್‌ನ ರೈತ ವಿರೋ ಧೋರಣೆಗೆ ನಿದರ್ಶನವಾಗಿದೆ.
ಬೆಂಬಲ ಬೆಲೆಯಲ್ಲಿ ಆಹಾರಧಾನ್ಯ ಖರೀದಿಗೆ ಮೀಸಲಿಟ್ಟ 1,500 ಕೋಟಿ ರೂ. ಹಿಂಪಡೆಯಲಾಗಿದ್ದು, ಸಹಸ್ರ ಸರೋವರ, ಸಹ್ಯಾದ್ರಿ ಸಿರಿ ಯೋಜನೆ ಜಲ ಹೊಂಡಗಳ ನಿರ್ಮಾಣ ಕೈಬಿಡಲಾಗಿದೆ. 180 ಕೋಟಿ ರೂ. ವೆಚ್ಚದಲ್ಲಿ ರೂಪಿಸಲಾಗಿದ್ದ ಜೀವನ ಜ್ಯೋತಿ ವಿಮಾ ಯೋಜನೆ, ರೈತರ ಮಕ್ಕಳಿಗೆ ನೀಡಲಾಗುತ್ತಿದ್ದ ವಿದ್ಯಾಸಿರಿ ಯೋಜನೆ ನಿಲ್ಲಿಸಲಾಗಿದೆ.
ಕೃಷಿ ಸಮ್ಮಾನ್, ಶ್ರಮಶಕ್ತಿ ಯೋಜನೆಯಡಿ ರೈತರಿಗೆ ನೀಡಲಾಗುತ್ತಿದ್ದ 500 ರೂ. ಸ್ಥಗಿತಗೊಳಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಜಾರಿ ನೆಪದಲ್ಲಿ ರೈತರ ಕಲ್ಯಾಣಕ್ಕಾಗಿ ಜಾರಿಗೊಳಿಸಿದ ಅನೇಕ ಯೋಜನೆಗಳನ್ನು ಕೈಬಿಟ್ಟು ರೈತ ವಿರೋಯಾಗಿ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ರಮಾನಂದ ಯಾದವ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ಧನಗೌಡ ನೆಲಹಾಳ, ಪದಾಕಾರಿಗಳಾದ ಕೆ.ಎಂ.ಪಾಟೀಲ್, ಕೊಟ್ರೇಶಪ್ಪ ಕೋರಿ, ಡಾ.ಶರಣಬಸವ ಪಾಟೀಲ್, ಜಿ.ಶಂಕರರೆಡ್ಡಿ, ಕಡಗೋಲ ಆಂಜಿನೇಯ, ಬಂಡೇಶ ವಲ್ಕಂದಿನ್ನಿ, ಬಿ.ಗೋವಿಂದ, ಡಾ.ನಾಗರಾಜ ಬಾಲ್ಕಿ, ಸುಲೋಚನಾ ಆಲ್ಕೂರು, ವಾಣಿಶ್ರೀ, ಸುಶೀಲಾ ಪಾಲ್ಗೊಂಡಿದ್ದರು.