

ಹುಮನಾಬಾದ್: ಕಾಂಗ್ರೆಸ್ ಸರ್ಕಾರದ ರೈತ, ಜನ ವಿರೋಧಿ ನೀತಿ ಖಂಡಿಸಿ ಪಟ್ಟಣದಲ್ಲಿ ಶುಕ್ರವಾರ ತಾಲೂಕು ಭಾರತೀಯ ಜನತಾ ಪಕ್ಷದ ರೈತ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಶಿವಚಂದ್ರ ವೃತ್ತದ ಮೂಲಕ ತಹಸಿಲ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ ರೈತರ, ಜನರ ಹಿತ ಕಾಪಾಡುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನೀರಾವರಿಗೂ ಹಣ ಇಲ್ಲ. ಕಿಸಾನ್ ಸಮ್ಮಾನ್, ರೈತ ವಿದ್ಯಾನಿಧಿ, ಭೂಸಿರಿ ಸೇರಿ ವಿವಿಧ ಯೋಜನೆ ರದ್ದಾಗಿವೆ. ರೈತರ ಬೆನ್ನುಮೂಳೆ ಮುರಿಯಲು ಸಿದ್ದರಾಮಯ್ಯರ ಸರ್ಕಾರ ಮುಂದಾಗಿದೆ ಎಂದು ಕಿಡಿಕಾರಿದರು.
ಮತಬ್ಯಾಂಕ್ ರಾಜಕಾರಣಕ್ಕಾಗಿ ಬೊಕ್ಕಸ ಲೂಟಿ ಮಾಡಿ ರೈತರನ್ನು ಸರ್ವನಾಶ ಮಾಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಬೆಂಬಲ ಬೆಲೆ ಜಾರಿ ಮಾಡಬೇಕು. ರೈತ ವಿರೋಧಿ ನೀತಿ ಕೈಬಿಡಬೇಕು ಸೇರಿ ವಿವಿಧ ಬೇಡಿಕೆಯುಳ್ಳ ಪತ್ರವನ್ನು ತಹಸೀಲ್ದಾರ್ ಅಂಜುಮ್ ತಬಸುಮ್ ಅವರಿಗೆ ಸಲ್ಲಿಸಲಾಯಿತು.
ಮುಖಂಡರಾದ ಪದ್ಮಾಕರ ಪಾಟೀಲï, ಸೋಮನಾಥ ಪಾಟೀಲ, ಮಲ್ಲಿಕಾರ್ಜುನ ಪಾಟೀಲï, ಮಲ್ಲಿಕಾರ್ಜುನ ಕುಂಬಾರ, ಮಾಜಿ ಶಾಸಕ ಸುಭಾಷ ಕಲ್ಲೂರ, ತಾಲೂಕು ಅಧ್ಯಕ್ಷ ಪ್ರಭಾಕರ ನಾಗರಾಳೆ, ರೈತ ಮೋರ್ಚಾ ಅಧ್ಯಕ್ಷ ರಾಮರಾವ ಕೇರೂರ, ಮುಖಂಡರಾದ ಬಸವರಾಜ ಆರ್ಯ, ಸಂತೋಷ ಪಾಟೀಲ್, ಕೆ.ಎಂ.ಗಜೇAದ್ರ, ಗಿರೀಶ ತುಂಬಾ, ರಾಜು ಭಂಡಾರಿ, ಅನೀಲ ಪಸರಗಿ, ಪರಮೇಶ್ವರ ಸೇಡೋಳೆ, ರವಿ ಹೊಸಳ್ಳಿ ಪ್ರಕಾಶ ಸದಲಾಪುರೆ, ಜಗನ್ನಾಥ ಪಾಟೀಲ್, ಶಿವರಾಜ ರಾಜೋಳೆ, ಜ್ಞಾನದೇವ ಧೂಮಾಳೆ, ಆನಂದ ಸಾಗರ ಇತರರಿದ್ದರು.