ರಾಜ್ಯ ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ

6 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಜಕೀಯ ಲಾಭಕ್ಕಾಗಿ ರಾಜ್ಯ ಸರ್ಕಾರ ಅಮಾಯಕರ ಬಲಿ ಪಡೆದಿರುವುದನ್ನು ಖಂಡಿಸಿ ನಗರದ ಸಮಾನ ಮನಸ್ಕರ ವೇದಿಕೆ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಆರ್​ಸಿಬಿ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರೂ ಕ್ರೀಡಾಂಗಣ ಗೇಟ್​ ತೆರೆಯದ ಕಾರಣ ಅಮಾಯಕರು ಜೀವ ಕಳೆದು ಕೊಳ್ಳುವಂತಾಗಿದೆ. ಇದಕ್ಕೆ ನೇರ ಹೊಣೆ ರಾಜ್ಯ ಸರ್ಕಾರ. ಸರ್ಕಾರ ರಾಜಕೀಯ ಲಾಭಕ್ಕಾಗಿ ಅಮಾಯಕರ ಪ್ರಾಣಕ್ಕೆ ಸಂಚಕಾರ ತಂದಿದೆ. ಇಂತಹ ಸರ್ಕಾರದ ವಿರುದ್ಧ ರಾಜ್ಯಪಾಲರು ಸೂಕ್ತ ಕ್ರಮಕೈಗೊಂಡು ಅಮಾಯಕರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ತನ್ನ ಮೇಲಿನ ಅಪವಾದಕ್ಕೆ ನಿಷ್ಠಾವಂತ ಪೊಲೀಸ್​ ಅಧಿಕಾರಿಗಳ ವೈಫ ಲ್ಯ ಕಾರಣ ಎಂದು ಅಮಾನತು ಮಾಡಿರುವುದು ಖಂಡನೀಯ. ಹೀಗಾಗಿ ಅವಘಢಕ್ಕೆ ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ ರಾಜಿನಾಮೆ ಪಡೆಯಬೇಕು ಎಂದು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ರವಾನಿಸಿದರು.

ವೇದಿಕೆ ಸದಸ್ಯರಾದ ಮೋಹನ ರಾಮದುರ್ಗ, ರಾಜೇಶ ಚಾಂದಗುಡೆ, ಭೀಮು ಸವಣೂರ, ಸಿದ್ದು ಕಮ್ಮಾರ, ನಾರಾಯಣ ನಾರಾಯಣಕರ, ನಾಗರಾಜ ಹಂಗಳಕಿ, ಶಿವು ಹೂಗಾರ, ಮಾರುತಿ ವಡ್ಡರ್​, ವಿಕ್ರಂ ಶಿಕ್ಕಲಗಾರ, ವೀರುಪಾಕ್ಷಪ್ಪ ಮರಗಲ್ಲ, ಎಸ್​.ಎಸ್​. ಅಂಗಡಿ, ಸಂಜಯ ಸಾಲಿಮಠ, ಸುಜಲ್​ ಸವಣೂರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net