ರಾಜ್ಯ ಸರ್ಕಾರ ಓಬಿಸಿಗಳಿಗೆ ಅನುದಾನ ನೀಡಲಿ

13 MANJU 02
Published on

ಹೊಸಪೇಟೆ: ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅನುದಾನ ಬಿಡುಗಡೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚಾದಿಂದ ನಗರದ ತಹಸೀಲ್ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಯಿತು.

ಕಾಂಗ್ರೆಸ್ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದೂ ಎರಡು ವರ್ಷ ಆಗುತ್ತಿದೆ. ಕಾಂಗ್ರೆಸ್ ಪ್ರಾರಂಭದಿAದಲೂ ಮತ ಬ್ಯಾಂಕ್ ಆಧಾರಿತ ರಾಜಕಾರಣ ಮಾಡಿಕೊಂಡು ಬಂದಿದೆ. ಬದುಕು ಕಟ್ಟಿ ಕೊಳ್ಳುವ ಯೋಜನೆ ಯಾವುದು ಕಾಂಗ್ರೆಸ್‌ನಲ್ಲಿ ಇಲ್ಲ. ದೂರದೃಷ್ಟಿತ್ವ ಯಾವುದೇ ಯೋಜನೆ ಕಾಂಗ್ರೆಸ್ ಜಾರಿಗೆ ತಂದಿಲ್ಲ. ರಾಜಕಾರಣದಲ್ಲಿ ಅಧಿಕಾರ ಬೇಕೆಂದಾಗ ಮಾತ್ರ ಅಹಿಂದ ಸಮಾವೇಶ ಬೇಕಾಗುತ್ತದೆ. ಸರ್ಕಾರ ಬಂದ ಮೇಲೆ ಹಿಂದುಳಿದ ವರ್ಗದವರಿಗೆ ಯಾವುದೇ ಯೋಜನೆ ಘೋಷಣೆ ಅಥವಾ ಅನುಷ್ಠಾನ ಮಾಡಿಲ್ಲ ಎಂದು ಕಾರ್ಯಕರ್ತರು ಆಗ್ರಹಿಸಿದರು.

ಹಿಂದುಳಿದ ವರ್ಗಗಳ ನಿಗಮಗಳಿಗೆ ಇವರು ಬಂದ ಬಳಿಕ ಅನುದಾನ ನಿಲ್ಲಿಸಿದ್ದಾರೆ. ದೇವರಾಜ ಅರಸು ನಿಗಮ ಸೇರಿ ಯಾವುದೇ ನಿಗಮಕ್ಕೂ ಘೋಷಿತ ಹಣ ನೀಡಿಲ್ಲ. 2023ರಲ್ಲಿ ಬೊಮ್ಮಾಯಿ ಸರ್ಕಾರ 546 ಕೋಟಿ ರೂ. ಘೋಷಿಸಿತ್ತು. ಆದರೆ, ಇವರ ಅವಧಿಯಲ್ಲಿ 300 ಕೋಟಿ ರೂ. ಘೋಷಿಸಿ ಕೇವಲ 170ಕೋಟಿ ನೀಡಿದ್ದಾರೆ. ಹಿಂದುಳಿದವರ ಪರವಾಗಿ ಇರುವ ಸರ್ಕಾರ ಎಂದು ಕೊಳ್ಳುವ ಕಾಂಗ್ರೆಸ್ ಸರ್ಕಾರ ಸಾವಿರ ಕೋಟಿಯನ್ನಾದರೂ ಕೊಡಬೇಕಿತ್ತು. ಆದರೆ, ಘೋಷಿಸಿದಷ್ಟು ಹಣವನ್ನು ನೀಡಿಲ್ಲ. ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಬರಿದಾಗಿ ಹಿಂದುಳಿದ ಸಮುದಾಯಕ್ಕೆ ನಾಮ ಹಾಕಿದ್ದಾರೆ ಎಂದು ಆರೋಪಿಸಿದರು.

ಸಿಎಂ ಸರ್ಕಾರ ಬಂದ ಬಳಿಕ ಹಿಂದುಳಿದ ವರ್ಗಗಳ ಅರಿವು ಶಿಕ್ಷಣ ಯೋಜನೆ ನಿಂತೆ ಹೋಗಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿಯೂ ಒಂದೇ ಒಂದು ಬೋರ್ ವೆಲ್ ತೆಗೆಯಲು ಸಾಧ್ಯವಾಗಿಲ್ಲ. ಹಿಂದುಳಿದ ಕಲ್ಯಾಣ ಕಾರ್ಯಕ್ರಮ ಸ್ಥಗಿತಗೊಂಡಿದೆ. ಈ ಬಾರಿ ಬಜೆಟ್ ನಲ್ಲಿಯೂ 1600 ಕೋಟಿ ರೂ. ಘೋಷಿಸಿ ಇದು ವರೆವಿಗೂ 369 ಕೋಟಿ ರೂ. ನೀಡಿದ್ದಾರೆ. ಕಲ್ಯಾಣದ ಚಿಂತನೆ ಸಂಪೂರ್ಣವಾಗಿ ಮರೆತಿದ್ದಾರೆ. ಬೇರೆ ಯಾವುದೇ ಕಾರ್ಯಕ್ರಮ ಕಾಣುತ್ತಿಲ್ಲ. ಗ್ರಾಮಾಂತರ ಭಾಗದಲ್ಲಿ ಉದ್ಯೋಗ ಸಿಗುತ್ತಿಲ್ಲ ಎಂದರು.

ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಯ್ಯಳಿ ತಿಮ್ಮಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಪ್ರಮುಖರಾದ ಅಶೋಕ್ ಜೀರೆ, ಮಧುರಚನ್ನಶಾಸ್ತಿç, ರೇವಣ್ಣ ಸಿದ್ದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net