

ಹಾಸನ: ಯಾವುದೇ ಸಂಕಷ್ಟ ಬಂದಾಗ ಮುಂದೆ ನಿಂತು ಸರ್ವೆ ಮಾಡಿ ಆರೋಗ್ಯ ಸೇವೆ ಸಲ್ಲಿಸುವುದರಲ್ಲಿ ಯಾವಾಗಲೂ ಸೇವೆ ಮಾಡುತ್ತಾ ಬಂದಿದ್ದು, ಈಗ ಡೆಂೆ ಪ್ರಕರಣ ಹೆಚ್ಚಾದ ಹಿನ್ನಲೆ ಕಳೆದ ಒಂದು ತಿಂಗಳಿನಿಂದ ಬೆಳಿಗ್ಗೆ 7 ಗಂಟೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ 10 ಗಂಟೆಗೆ ಹೋಗಲು ಅವಕಾಶ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಇದೇ ವೇಳೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಲಹೆಗಾರ ಜಿ. ಹನುಮೇಶ್ ಮಾತನಾಡಿ, ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆಗಳ ವಿಷಯದಲ್ಲಿ ಸದಾ ಸಿದ್ಧರಿದ್ದು, ಪರಿಸ್ಥಿತಿಗನುಗುಣವಾಗಿ ಶ್ರಮಿಸುತ್ತಾ ಬಂದಿದ್ದಾರೆ. ಈ ಹಿಂದೆ ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೋವಿಡ್ ವಾರಿಯರ್ಸ್‌ಗಳಾಗಿ ದುಡಿದಿದ್ದೇವೆ. ಇಲಾಖೆ ಮತ್ತು ಜನರ ಮೆಚ್ಚುಗೆಗೆ ಪಾತ್ರರಾಗಿದ್ದೇವೆ ಎಂಬುದು ತಮ್ಮ ಗಮನದಲ್ಲಿದೆ ಎಂದರು.
ಹಾಸನ ಜಿಲ್ಲೆಯಲ್ಲಿ ಡೆಂೆ ಪ್ರಕರಣಗಳು ಹೆಚ್ಚಾಗಿರುವ ಕಾರಣ ಪ್ರತಿ ದಿನ ಬೆಳಿಗ್ಗೆ 7 ರಿಂದಲೇ ಡೆಂೆ ಸರ್ವೆ ಮಾಡಬೇಕೆಂದು ನಮ್ಮನ್ನು ಒತ್ತಾಯಿಸಲಾಗುತ್ತಿದೆ. ಮನೆಯಲ್ಲಿ ಹಲವು ರೀತಿಯ ಜವಾಬ್ದಾರಿಗಳಿರುವ ಕಾರಣ ಮುಂಜಾನೆ ಎಲ್ಲಾ ಬಿಟ್ಟು ಸರ್ವೆ ಮಾಡಲು ಹೋಗುತ್ತಿರುವುದರಿಂದ ನಿತ್ಯ ಮನೆಯಲ್ಲಿ ಘರ್ಷಣೆ ನಡೆಯುತ್ತಿವೆ.
ಈಗಾಗಲೇ ಒಂದು ತಿಂಗಳ ಕಾಲ ಸರ್ವೆ ಮಾಡಿದ್ದೇವೆ. ಇನ್ನು ಮುಂದೆ ನಾವು ಬೆಳಿಗ್ಗೆ 10 ಗಂ ಮೇಲೆ ಸರ್ವೆ ಮಾಡುತ್ತೇವೆ. ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು. ಹಾಗೆಯೇ ಇದು ಹೆಚ್ಚುವರಿ ಕೆಲಸವಾದ್ದರಿಂದ ಆರೋಗ್ಯ ಇಲಾಖೆ ಜಾರಿಯಲ್ಲಿರುವ ಆದೇಶಾನುಸಾರ ಇದಕ್ಕೆ ನೀಡಬೇಕಾದ ದಿನ ಭತ್ಯೆಯನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಸ್ಕೀಂ ಗಳ ಸರ್ವೆ ಹಣ ಇನ್ನೂ ಕೂಡ ಪಾವತಿಯಾಗಿಲ್ಲ. ಅದನ್ನು ಸಹ ಬಿಡುಗಡೆ ಮಾಡಬೇಕು. ಈ ಬೇಡಿಕೆಗಳನ್ನು ತಾವು ಪರಿಗಣಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಮಮತಾ, ಜಿಲ್ಲಾ ಕಾರ್ಯದರ್ಶಿ ಪುಷ್ಪಲತಾ, ಅರಕಲಗೂಡು ತಾಲೂಕು ಮುಖಂಡರಾದ ತಾರಾ, ಅರಸೀಕೆರೆ ತಾಲೂಕು ಮುಂಖಂಡರಾದ ಕೆ.ಸಿ.ರಮಾ, ಆಲೂರಿನ ಶಿವಮ್ಮ, ಬೇಲೂರಿನ ಬಾನು, ಸಕಲೇಶಪುರದ ಗೌರಮ್ಮ, ಹಾಸನ ತಾಲೂಕಿನ ನಯನಾ, ಹೊಳೆನರಸಿಪುರದ ಪುಷ್ಪ ಇತರರು ಇದ್ದರು.