

ಮೈಸೂರು: ಪ್ರಧಾನಮಂತ್ರಿ ಸ್ವನಿಧಿ, ಪಿಎಂ ಸನ್ಮಾನ್ ಯೋಜನೆಗಳ ಅನುಷ್ಠಾನ ಸಂಬಂಧ ಮಾಜಿ ಶಾಸಕ ಎಸ್.ಎ.ರಾಮದಾಸ್ ಅವರನ್ನು ಬಿಜೆಪಿಯಿಂದ ರಾಜ್ಯ ಸಂಚಾಲಕರನ್ನಾಗಿ ನೇಮಿಸಲಾಗಿದೆ.
ರಸ್ತೆ ಬದಿ ವ್ಯಾಪಾರಿಗಳು, ಸಂಚಾರಿ ವ್ಯಾಪಾರಿಗಳು, ಪತ್ರಿಕಾ ವಿತರಕರು, ಹಾಲು ವಿತರಕರು ಸೇರಿದಂತೆ ಅಸಂಘಟಿತ ಕಾರ್ಮಿಕರು ಹಾಗೂ ಇನ್ನಿತರ ಫಲಾನುಭವಿಗಳಿಗೆ ಕೇಂದ್ರದ 9 ಯೋಜನೆಗಳನ್ನು ತಲುಪಿಸುವ ಜವಾಬ್ದಾರಿ ನೀಡಲಾಗಿದೆ. ಸೆ.16ರಿಂದ ಅಕ್ಟೋಬರ್ 15ರವರೆಗೆ ‘ಪಿಎಂ ಸ್ವನಿಧಿ ಮಾಸ’ ಆಚರಿಸುವ ಮೂಲಕ ಪತ್ರಿಕಾ ವಿತರಕರು ಸೇರಿದಂತೆ ಇತರರಿಗೆ ನೋಂದಣಿ, ಸೌಲಭ್ಯ ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.