

ಬೇಲೂರು: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸಿಟಿಗೈಸ್ ಹಾಗೂ ಎನ್‌ಎಂಸಿ ಕ್ರಿಕೇಟರ್ಸ್ ಆಯೋಜಿಸಿದ್ದ ಮೂರು ದಿನಗಳ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾವಳಿಗೆ ಕಾಂಗ್ರೆಸ್ ಮುಖಂಡ ಹಾಗೂ ಶಿವಗಂಗಾ ಗ್ರಾನೈಟ್ ಮಾಲೀಕ ಎಂ.ಎಸ್.ರಾಜಶೇಖರ್ ಶುಕ್ರವಾರ ಸಂಜೆ ಚಾಲನೆ ನೀಡಿದರು.
ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಕಾಂಗ್ರೆಸ್ ಮುಖಂಡ, ಶಿವಗಂಗಾ ಗ್ರಾನೈಟ್ ಮಾಲೀಕ ಎಸ್.ಎಂ.ರಾಜಶೇಖರ್ ಮಾತನಾಡಿ, ಬೇಲೂರು ತಾಲೂಕಿನ ಕ್ರೀಡಾಪಟುಗಳಿಗಾಗಿ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮುಂದಾಗಬೇಕು. ಜತೆಗೆ ನಮ್ಮ ಮುಂದಿರುವ ಈ ಮೈದಾನವನ್ನು ನಮ್ಮಗಳ ಉಸಿರು ಇರುವವರೆಗೂ ಯಾವುದೇ ಕಾರಣಕ್ಕೂ ಮಾರಾಟಕ್ಕೆ ಅವಕಾಶ ಕೊಡುವುದಿಲ್ಲ. ಇಂತಹ ಮೈದಾನವನ್ನು ಉಳಿಸುವ ಮೂಲಕ ತಾಲೂಕಿನಲ್ಲಿರುವ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಮತ್ತು ಅನುಕೂಲ ಕಲ್ಪಿಸುವುದಕ್ಕಾಗಿ ಎಲ್ಲರು ಮುಂದೆ ಬರಬೇಕು. ಯಾವುದೇ ಕಾರಣಕ್ಕೂ ಬೇರೆಯವರ ವಶಕ್ಕೆ ಮೈದಾನ ಬಿಡುವುದಿಲ್ಲ. ಎಲ್ಲರೂ ಮೈದಾನ ಉಳಿವಿಗೆ ಹೋರಾಟ ಮಾಡೋಣ. ಬೇಲೂರಿನ ನಾಗರೀಕರು ಮತ್ತು ಪ್ರೀಡಾಪಟುಗಳಿಗೆ ಇಂತಹ ಅದ್ಬುತವಾದ ಕ್ರಿಕೇಟ್ ಪಂದ್ಯಾವಳಿ ಆಯೋಜಿಸುವ ಮೂಲಕ ಸಿಟಿಗೈಸ್ ಹಾಗೂ ಎನ್‌ಎಂಸಿ ಕ್ರೀಡಾ ತಂಡದವರು ಉತ್ತಮ ಕೆಲಸ ಮಾಡುವುದರೊಂದಿಗೆ ಜನತೆಗೆ ಮನರಂಜನೆ ನೀಡುದ್ದಾರೆ. ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ಆಗಮಿಸಿರುವ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಕ್ರೀಡಾ ಮನೋಭಾವ ಮೆರೆದು ಪಂದ್ಯಾವಳಿಯ ಯಶಸ್ಸಿಗೆ ಮುಂದಾಗಬೇಕು ಎಂದರು.
ಹಿರಿಯ ಕ್ರಿಕೇಟ್ ಆಟಗಾರ ಹಾಗೂ ಪುರಸಭೆ ಮಾಜಿ ಸದಸ್ಯ ಎಂ.ಗುರುಪಾದಸ್ವಾಮಿ ಮಾತನಾಡಿ, ಕ್ರೀಡೆ ಮುಷ್ಯನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಒಂದಿಲ್ಲೊಂದು ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ಕಾಪಾಡಿ ಕೊಳ್ಳಬೇಕು. ಮತ್ತು ಬೇಲೂರಿನಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾವಳಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಕ್ರೀಡಾಪಟುಗಳು ಸೌಹಾರ್ಧಯುತವಾಗಿ ಪಾಲ್ಗೊಳ್ಳಬೇಕು ಎಂದರು.
ಪಂದ್ಯಾವಳಿಯಲ್ಲಿ ರಾಜ್ಯದ ಶಿವಮೊಗ್ಗ, ದಾವಣಗೆರೆ, ಮಂಗಳೂರು, ಉಡುಪಿ, ಹಾಸನ, ಚಿಕ್ಕಮಗಳೂರು, ಮಡಿಕೇರಿ ಸೇರಿದಂತೆ ಸ್ಥಳೀಯ ತಂಡಗಳು ಭಾಗವಹಿಸಿದ್ದವು
ಪಂದ್ಯಾವಳಿ ವ್ಯವಸ್ಥಾಪಕರಾದ ಜುಬೇರ್ ಅಹಮದ್, ಬಾಬು ಪ್ರಸಾದ್, ಜೀವನ್, ನಯಾಜ್, ಉಲ್ಲಾಸ್, ನಾಗೇಂದ್ರ, ಆಸೀಫ್, ಶಂಭುಗನಹಳ್ಳಿ ಬಾಬು, ಹಿರಿಯ ಆಟಗಾರರಾದ ಲೋಕೇಶ್, ಪಾಪು, ಚನ್ನು, ಲಕ್ಷ್ಮಣ್, ಸುಂದ್ರೇಶ್ ಸೇರಿದಂತೆ ಇತರರಿದ್ಸರು.