

ಚಾಮರಾಜನಗರ: ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಅಯೋಜಿಸಿದ್ದ ಬೆಂಗಳೂರಿನ ಸಾಯಿ ಶೂಟಿಂಗ್ ರೆಂಜ್ ನಲ್ಲಿ ನಡೆದ 2 ನೇ ನಾಗರಾಜರಾವ್ ಜಗದಾಲಿಯ ಶೂಟಿಂಗ್ & ಚಾಂಪಿಯನ್ ಶಿಪ್ 2025 ರ .22 ಪ್ರೋನ್ ಮಹಿಳಾ ವಿಭಾಗದಲ್ಲಿ ನಗರದ ಸತ್ಯಭಾಮ ರಮೇಶ್ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಚಿನ್ನದಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಮಹಿಳಾ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದ ಸತ್ಯಭಾಮ ರಮೇಶ್ ಚಿನ್ನದಪದಕ ತನ್ನ ಮುಡಿಗೇರಿಸಿಕೊಂಡಿದ್ದಾರೆ. ಅವರ ಪತಿ ರಮೇಶ್‌ಬಾಬು ಕೂಡ ಉತ್ತಮ ಶೂಟರ್ ಆಗಿ ಅನೇಕ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಸತ್ಯಭಾಮ ಅವರಿಗೆ ತಮ್ಮ ಪತಿ ರಮೇಶ್ ಬಾಬು ಅವರೆ ಪ್ರೇರಣಿಯಾಗಿದ್ದಾರೆ. ಅವರನ್ನು ಅವರ ಸ್ನೇಹ ಬಳಗ ಅಭಿನಂದಿಸಿದೆ