ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಜ.8ಕ್ಕೆ

IMG-20230106-WA0059.jpg
Published on

ದಾವಣಗೆರೆ: ಕರ್ನಾಟಕ ಅಮೆಚೂರ್ ಬಾಡಿಬಿಲ್ಡರ್ ಅಸೋಸಿಯೇಷನ್‌ನಿಂದ ನಗರದ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ಜ.8 ರಂದು ಮಿಸ್ಟರ್ ಡ್ರೀಮ್ಸ್ ಕ್ಲಾಸಿಕ್ -2023 ಜಿಲ್ಲಾ ಹಾಗೂ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಹಾಗೂ ರಾಜ್ಯಮಟ್ಟದ ಮೆನ್ ಫಿಸಿಕ್ ಸ್ಪರ್ಧೆಗಳು ನಡೆಯಲಿವೆ.

ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿವೆ. ವಿಜೇತ ತಲಾ ಐವರಿಗೆ ಒಟ್ಟು 5 ಲಕ್ಷ ರೂ.ಗಳ ಬಹುಮಾನ ಹಂಚಿಕೆ ಮಾಡಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರೀಡಾಪಟು ಮಂಜು ಮೊಗವೀರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜ.8ರಂದು ಸಂಜೆ 5 ಗಂಟೆಗೆ ಸಂಸದ ಜಿ.ಎಂ.ಸಿದ್ದೇಶ್ವರ ಸ್ಪರ್ಧೆಗಳಿಗೆ ಚಾಲನೆ ನೀಡುವರು. ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು. ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ, ನಟ ಧನ್ವೀರ್‌ಗೌಡ, ಎಸ್ಪಿ ಸಿ.ಬಿ.ರಿಷ್ಯಂತ್, ಸಹಾಯಕ ಪೊಲೀಸ್ ಆಯುಕ್ತ ಎಂ.ಬಾಬು ಇತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಅಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಭಾಗವಹಿಸುವ ಕ್ರೀಡಾಪಟುಗಳ ಎತ್ತರ ತಪಾಸಣೆ ನಡೆಯಲಿದೆ. ಕರ್ನಾಟಕ ಅಮೆಚೂರ್ ಬಾಡಿಬಿಲ್ಡರ್ ಅಸೋಸಿಯೇಷನ್ ಕಾರ್ಯದರ್ಶಿ ಆರ್.ರಘುನಂದನ್ ತೀರ್ಪುಗಾರರಾಗಿ ಭಾಗವಹಿಸುವರು ಎಂದು ವಿವರಿಸಿದರು. ವಿನಯಕುಮಾರ್, ಗಿರೀಶ್‌ಕುಮಾರ್, ಮಾರುತಿ, ನವೀನ್, ಪ್ರಮೋದ್ ಸುದ್ದಿಗೋಷ್ಠಿಯಲ್ಲಿದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net