

ಹನೂರು: ಕೊಳ್ಳೇಗಾಲ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಇತ್ತೀಚಿಗೆ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ತಾಲೂಕಿನ ಮಾರ್ಟಳ್ಳಿ ಸೆಂಟ್ ಮೇರಿಸ್ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಪಂದ್ಯದಲ್ಲಿ ಜಯ ಗಳಿಸಿ ರಾಜ್ಯಮಟ್ಟಕ್ಕೆ ಅಯ್ಕೆಯಾಗಿದ್ದಾರೆ.
ಬಾಲಕಿಯರ ಥ್ರೋಬಾಲ್‌ನಲ್ಲಿ ರೂಪಶ್ರೀ ತಂಡ, ಬ್ಯಾಸ್ಕೆಟ್‌ಬಾಲ್‌ನಲ್ಲಿ ಅಮೂಲ್ಯ ತಂಡ, ಹ್ಯಾಂಡ್‌ಬಾಲ್‌ನಲ್ಲಿ ಎಸ್ತರ್ ತಂಡ, ಬಾಲಕರ ಬಾಸ್ಕೆಟ್‌ಬಾಲ್‌ನಲ್ಲಿ ಜಾನ್ಸನ್ ತಂಡ ಹಾಗೂ ಟೆನಿಸ್ ವಾಲಿಬಾಲ್‌ನಲ್ಲಿ ಮನೇಶ್ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಹಾಗೆಯೇ ಅಥ್ಲೆಟಿಕ್ಸ್‌ನಲ್ಲಿ ಹೇಮಾಮಾಲಿನಿ, ಎಸ್ತರ್, ಪ್ರಮೀಳಾ, ನದಿಯಾ ಹಾಗೂ ಪಥಿನಾಥನ್ ಪ್ರಥಮ ಸ್ಥಾನ ಗಳಿಸುವುದರ ಮೂಲಕ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಸಾಧನೆಗೈದು ಕಾಲೇಜಿಗೆ ಕೀರ್ತಿ ತಂದು ಕೊಟ್ಟ ವಿದ್ಯಾರ್ಥಿಗಳನ್ನು ಸಂಸ್ಥೆಯ ವ್ಯವಸ್ಥಾಪಕ ಫಾದರ್ ಡಾ. ವಿನ್ಸೆಂಟ್, ಪ್ರಾಂಶುಪಾಲ ಫಾದರ್ ಕ್ರಿಸ್ಟೋಫರ್ ಕ್ಲಾರೆಟ್ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.