ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಚೈತ್ರಾ, ಶೃತಿ ಕೀರ್ತಿ ಆಯ್ಕೆ

05-11-24--krs1 (1)
ಹುಲಿಕೆರೆ ಗ್ರಾಮದ ಬಿ.ಜಿ.ಎಸ್. ಬಾಲಜಗತ್ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯರಾದ ಚೈತ್ರಾ ಹಾಗೂ ಶೃತಿ ಕೀರ್ತಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಮುಖ್ಯಶಿಕ್ಷಕಿ ಆಶಾ.ವಿ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.
Published on

ಕೆ.ಆರ್.ಸಾಗರ: ಹುಲಿಕೆರೆ ಗ್ರಾಮದ ಬಿ.ಜಿ.ಎಸ್ ಬಾಲಜಗತ್ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯರಾದ ಚೈತ್ರ ಹಾಗೂ ಶೃತಿ ಕೀರ್ತಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಸೋಮವಾರ ಮಂಡ್ಯದಲ್ಲಿ ನಡೆದ ಫ್ರೌಡಶಾಲಾ ಮಟ್ಟದ ಜಿಲ್ಲಾ ಕ್ರೀಡಾಕೂಟದಲ್ಲಿ ಡಿಸ್ಕಸ್ ವಿಭಾಗದಲ್ಲಿ ಚೈತ್ರಾ ಹಾಗೂ ಹೈಜಂಪ್ ವಿಭಾಗದಲ್ಲಿ ಶೃತಿ ಕೀರ್ತಿ ಪ್ರಥಮ ಸ್ಥಾನಗಳಿಸಿ, ನಡೆಯುವ ರಾಜ್ಯ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಬ್ಬರನ್ನು ಶಾಲೆ ವತಿಯಿಂದ ಮುಖ್ಯಶಿಕ್ಷಕಿ ಆಶಾ.ವಿ ಹಾಗೂ ಶಿಕ್ಷಕರು ಮಂಗಳವಾರ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net