

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಇಲ್ಲಿನ ಪ್ರಿಸಮ್ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಿ. ಸುದೀಪ ಜಾವೆಲಿನ್ ಥ್ರೋದಲ್ಲಿ ಪ್ರಥಮ ಹಾಗೂ ರೋಹನ್ ಬರಗಲಿ ಹ್ಯಾಮರ್ ಥ್ರೋದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸುಮೀತ ಭೂಮಣ್ಣವರ ಟ್ರಿಪಲ್ ಜಂಪ್‌ನಲ್ಲಿ ತೃತೀಯ ಸ್ಥಾನ ಪಡೆದಿದ್ದಾನೆ. ವಿದ್ಯಾರ್ಥಿಗಳನ್ನು ಕಾಲೇಜು ನಿರ್ದೇಶಕ ಶ್ರೀನಿವಾಸ ತಿಮ್ಮನಗೌಡರ, ಕಾರ್ಯದರ್ಶಿ ವೀಣಾ ತಿಮ್ಮನಗೌಡರ, ಪ್ರಾಚಾರ್ಯ ಎಸ್.ಎಂ. ಹುಲ್ಲೂರ, ದೈಹಿಕ ಶಿಕ್ಷಣ ನಿರ್ದೇಶಕ ವೈ.ಎಂ. ಮಾಸ್ತಿ ಅಭಿನಂದಿಸಿದ್ದಾರೆ.