ರಾಜ್ಯ ಮಟ್ಟದ ಕರಾಟೆಯಲ್ಲಿ ದೀಪಿಕಾಗೆ ದ್ವಿತೀಯ ಸ್ಥಾನ

Hampapura 01
ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ದ್ವೀತಿಯ ಸ್ಥಾನ ಗಳಿಸಿದ ಹೊಮ್ಮರಗಳ್ಳಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕು.ದೀಪಿಕಾಗಳನ್ನು ಶಾಲೆಯಲ್ಲಿ ಗುರುವಾರ ಸನ್ಮಾನಿಸಲಾಯಿತು. ಪರಮೇಶ್(ಬಚ್ಚನ್), ಬಿ.ಎನ್.ನಾಗಾರ್ಜುನ, ಎಸ್.ಮಹಾದೇವಿ, ಸಾವಿತ್ರಿಬಾಯಿ ಇತರರಿದ್ದರು.
Published on

ಹಂಪಾಪುರ: ಎಚ್.ಡಿ.ಕೋಟೆ ತಾಲೂಕಿನ ಹೊಮ್ಮರಗಳ್ಳಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕು.ದೀಪಿಕಾ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ದ್ವೀತಿಯ ಸ್ಥಾನ ಗಳಿಸಿ ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಕು.ದೀಪಿಕಾ ಪ್ರಸ್ತುತ 5ನೇ ತರಗತಿಯಲ್ಲಿ ಓದುತ್ತಿದ್ದು, ಕಳೆದ ಎರಡು ವರ್ಷಗಳಿಂದ ನಿರಂತರ ಪರಿಶ್ರಮ ಹಾಕುತ್ತಿದ್ದು, ಪೂರಕವಾಗಿ ಆಕೆಯ ತಾಯಿ ಯಶೋದಾ ದೀಪಿಕಾಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಯಶೋದಾ ಅವರೂ ಇದೇ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ರೆಕ್ ಕ್ಯೋ ಶಿನ್ ಕೈ ಮಾರ್ಷಲ್ ಆರ್ಟ್ಸ್ ಟ್ರಸ್ಟ್ ವತಿಯಿಂದ ನಡೆಸಲಾದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಕೇರಳ ಹಾಗೂ ತಮಿಳುನಾಡು ರಾಜ್ಯದ ಚಾಂಪಿಯನ್‌ಗಳನ್ನು ಮಣಿಸುವ ಮೂಲಕ ದೀಪಿಕಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ದೀಪಿಕಾ ಅವರನ್ನು ಗುರುವಾರ ಶಾಲಾ ವತಿಯಿಂದ ಸನ್ಮಾನಿಸಲಾಯಿತು.

ಹೊಮ್ಮರಗಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಪರಮೇಶ್(ಬಚ್ಚನ್), ಶಾಲಾ ಶಿಕ್ಷಕರಾದ ಬಿ.ಎನ್.ನಾಗಾರ್ಜುನ, ಎಸ್.ಮಹಾದೇವಿ, ಸಾವಿತ್ರಿಬಾಯಿ, ಆಲಮೇಲ, ಎಂ. ವೇದಾವತಿ, ಕೆ.ಸಿ.ತಾರಾ, ಪಿ.ಟಿ.ಚಿತ್ರಾವತಿ, ಸಿ.ವಿ.ಶಶಿಕಲಾ, ಎಸ್.ಶಶಿಕಲಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net