ರಾಜ್ಯ ಮಟ್ಟದ ಎರಡು ದಿನದ ಚೆಸ್ ಪಂದ್ಯಾವಳಿಯನ್ನು ಉದ್ಘಾಟನೆ

ರಾಜ್ಯ ಮಟ್ಟದ ಎರಡು ದಿನದ ಚೆಸ್ ಪಂದ್ಯಾವಳಿಯನ್ನು ಉದ್ಘಾಟನೆ
Published on

ಹಾಸನ: ಚೆಸ್ ಅಟವನ್ನು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಕಲಿಸುವುದ್ದರಿಂದ ಅವರಲ್ಲಿ ಮಾನಸಿಕ ಸ್ಥೈರ್ಯ ಹಾಗೂ ಬುದ್ದಿ ಚುರುಕುಗೊಳ್ಳುತ್ತದೆ ಎಂದು ರಾಯಲ್ ಅಪೋಲೊ ಅಂತರಾಷ್ಟ್ರೀಯ ಶಾಲೆಯ ಪ್ರಾಂಶುಪಾಲ ಎಲ್.ಪಿ. ರವಿಕುಮಾರ್ ತಿಳಿಸಿದರು.
ನಗರದ ಸಮೀಪ ಚಿಕ್ಕಕೊಂಡಗುಳ, ರಿಂಗ್ ರಸ್ತೆ ಬಳಿ ಇರುವ ರಾಯಲ್ ಅಪೋಲೊ ಅಂತರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಚೆಸ್ ಅಸೋಸಿಯೇಷನ್, ಕದಂಬ ಚೆಸ್ ಅಕಾಡೆಮಿ ಮತ್ತು ರಾಯಲ್ ಅಪೋಲೊ ಶಾಲೆಯ ಸಹ ಭಾಗಿತ್ವದೊಂದಿಗೆ ಹಮ್ಮಿಕೊಳ್ಳಲಾಗಿದ್ದ 15 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ರಾಜ್ಯ ಮಟ್ಟದ ಎರಡು ದಿನದ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚೆಸ್ ಎಂಬುದು ಜೀವನದ ಭರವಸೆಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಮಕ್ಕಳಲ್ಲಿ ವೈಜ್ಞಾನಿಕ ಆಲೋಚನೆಯನ್ನು ಬೆಳೆಸಲು ಅನುಕೂಲವಾಗಲಿದೆ ಎಂದರು.
ಯಾವುದೇ ಕ್ರೀಡೆ ಆಗಿರಲಿ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಜೊತೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅತೀ ಮುಖ್ಯವಾಗಿದೆ. ರಾಜ್ಯ ಮಟ್ಟದ ಕ್ರೀಡೆಯನ್ನು ನಗರದಲ್ಲಿ ಎರಡನೇ ಬಾರಿ ಏರ್ಪಡಿಸಿರುವುದು ಚೇಸ್ ಆಟಗಾರರಿಗೆ ಇದೊಂದು ಸುಸಂದರ್ಭವಾಗಿದೆ ಎಂದು ಇದೆ ವೇಳೆ ಚೆಸ್ ಆಟಗಾರರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಜನ ಮಕ್ಕಳು ಚೆಸ್ ಆಟಗಾರರು ತಮ್ಮ ಪ್ರತಿಭೆಯನ್ನು ಏಕಾಗ್ರತೆಯಿಂದ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ಅರವಿಂದ ಶಾಸ್ತ್ರಿ, ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷೆ ರಶ್ಮಿ ಕಿರಣ್, ಉಪಾಧ್ಯಕ್ಷ ಎಂ.ಎನ್. ಹರೀಶ್ ಕುಮಾರ್, ಕದಂಬ ಚೆಸ್ ಅಕಾಡೆಮಿ ಸ್ಥಾಪಕ ಎಂ.ಟಿ. ತ್ಯಾಗರಾಜು, ಜಿಲ್ಲಾ ಚೆಸ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ರಾಧ ಜಗದೀಶ್, ಚನ್ನಪಟ್ಟಣ ಶಾಖೆಯ ತರಬೇತುದಾರ ಕಾವ್ಯ ಚಂದನ್, ಹೇಮಾವತಿ ನಗರ ಶಾಖೆಯ ತರಬೇತುದಾರ ನಯನ ಸತೀಷ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net