ರಾಜ್ಯ ಮಟ್ಟಕ್ಕೆ ಕ್ರಿಸ್ತರಾಜ ಕಾಲೇಜು ವಿದ್ಯಾರ್ಥಿಗಳು ಆಯ್ಕೆ

22 HANUR 4
Published on

ಹನೂರು: ಕೊಳ್ಳೇಗಾಲದ ಶ್ರೀ ಮಹದೇಶ್ವರ ಕಾಲೇಜು ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಹನೂರಿನ ಕ್ರಿಸ್ತರಾಜ ಕಾಲೇಜು ವಿದ್ಯಾರ್ಥಿಗಳು ವಿವಿಧ ಪಂದ್ಯದಲ್ಲಿ ಜಯಗಳಿಸಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಥ್ರೋಬಾಲ್‌ನಲ್ಲಿ ನಂದೀಶ್ ತಂಡ ಪ್ರಥಮ ಸ್ಥಾನ ಹಾಗೂ ಬಾಲಕಿಯರ ವಿಭಾಗದಲ್ಲಿ ಖೋ ಖೋದಲ್ಲಿ ಸಿಂಚನಾ ತಂಡ ಹಾಗೂ ಬಾಲ್ ಬ್ಯಾಡ್ಮಿಂಟನ್ ಮತ್ತು ಚೆಸ್‌ನಲ್ಲಿ ಬಾಲಕಿಯರ ತಂಡ ಪ್ರಥಮ ಸ್ಥಾನ ಗಳಿಸಿದೆ. 400 ಮೀಟರ್ ಓಟದಲ್ಲಿ ನಿಶಾ, 800 ಮೀ.ನಲ್ಲಿ ಯೋಗೇಶ್, ಉದ್ದ ಜಿಗಿತದಲ್ಲಿ ಶಕ್ತಿ ಪ್ರಥಮ ಸ್ಥಾನ ಪಡೆದಿದ್ದಾರೆ. 100 ಮೀ.ನಲ್ಲಿ ದಿನೇಶ್, 400 ಮೀ.ನಲ್ಲಿ ಅನಿಲ್ ಹಾಗೂ ವಾಕ್ ರೇಸ್‌ನಲ್ಲಿ ಸ್ಫೂರ್ತಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಗುಡ್ಡಗಾಡು ಓಟದಲ್ಲಿ ಸಿಂಧೂ ಮತ್ತು ಪಾರ್ವತಮ್ಮ, 4್ಡ100 ರಿಲೇಯಲ್ಲಿ ಕೇಶವ ತಂಡ ಪ್ರಥಮ ಹಾಗೂ 4್ಡ100 ರಿಲೇಯಲ್ಲಿ ಸಿಂಚನಾ ತಂಡ ದ್ವೀತಿಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.

ವಾಕ್ ರೇಸ್‌ನಲ್ಲಿ ಸುಮಿತ್ರಾ, ಆದರ್ಶ್, 800 ಮೀನಲ್ಲಿ ಸಮಿತ್ರಾ ಹಾಗೂ ಎತ್ತರ ಜಿಗಿತದಲ್ಲಿ ಪವಿತ್ರಾ ತೃತೀಯ ಸ್ಥಾನ ಗಳಿಸಿದ್ದಾರೆ. ವಿದ್ಯಾರ್ಥಿಗಳನ್ನು ಸಂಸ್ಥೆ ವ್ಯವಸ್ಥಾಪಕ ಫಾದರ್ ರೋಷನ್, ಪ್ರಾಂಶುಪಾಲೆ ಸಿಸ್ಟರ್ ಜಾನ್ ಶಾಂತಿ, ತರಬೇತುದಾರ ವಿನೋದ್, ಉಪನ್ಯಾಸಕರಾದ ಪ್ರಕಾಶ್, ವಿನಿಲ್‌ಕುಮಾರ್, ಅನುಶ್ರೀ, ಜೈನ್ ಮುತ್ತು, ಪವಿತ್ರಾ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net