ರಾಜ್ಯ ಮಟ್ಟಕ್ಕೆ ಆಯ್ಕೆ

3blrp4
Published on


ಹಾಸನ: ಬೇಲೂರಿನ ಹೊಯ್ಸಳ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಸನದಲ್ಲಿ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಜಯಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಕಾಲೇಜಿನ ಕ್ರೀಡಾ ವ್ಯವಸ್ಥಾಪಕ ಆರ್.ಪಿ.ಗಂಗಾದರ್ ಕ್ರೀಡಾಪಟುಗಳನ್ನು ಅಭಿನಂದಿಸಿ ಮಾತನಾಡಿ, ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಬಾಲಕರ ವಿಭಾಗದ ಜಾವಲಿನ್ ಥ್ರೋನಲ್ಲಿ ನಂದೀಶ್ ಹಾಗೂ ಅನು.ಎಂ.ಕೆ, ಟೆನಿಕಾಯ್ಟನಲ್ಲಿ ಕೌಶಿಕ್, ಪ್ರೀತಮ್, ಕಾರ್ತಿಕ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿ ಪಡೆದು ಕಾಲೇಜು, ಜಿಲ್ಲೆಗೆ ಕೀರ್ತಿ ತರುವಂತಾಗಲಿ ಎಂದು ಹಾರೈಸಿದರು. ಪ್ರಾಂಶುಪಾಲ ನಿರಂಜನ್, ಉಪನ್ಯಾಸಕ ಡಿ.ಎಸ್.ಚಂದನ್‌ಕುಮಾರ್, ವೆಂಕಟೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net