ರಾಜ್ಯ ಬಂದ್​ಗೆ ಸವಣೂರ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ

28 svr 01
Published on

ಸವಣೂರ: ರಾಜ್ಯ ಬಂದ್​ಗೆ ಸವಣೂರ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಅನ್ನದಾತ ಕೃಷಿಕ ಸಮಾಜ, ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಪದಾಧಿಕಾರಿಗಳು ಪಟ್ಟಣದ ಎಪಿಎಂಸಿಯಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತ್ಯೇಕವಾಗಿ ಪ್ರತಿಭಟನೆ ಮೆರವಣಿಗೆ ನಡೆಸಿದರು. ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಅನ್ನದಾತ ಕೃಷಿಕ ಸಮಾಜ ತಾಲೂಕಾಧ್ಯಕ್ಷ ಶಿವಯ್ಯ ಹುಚ್ಚಯ್ಯನವರಮಠ, ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಚನ್ನಪ್ಪ ಮರಡೂರ, ಪದಾಧಿಕಾರಿಗಳಾದ ಶಾಂತಪ್ಪ ಪಂಚಪ್ಪನವರ, ಸಿದ್ದನಗೌಡ ಪಾಟೀಲ, ಓಂಕಾರ ಪಾಟೀಲ, ಮೆಹಬೂಬ್​ಸಾಬ್ ನದಾಫ್, ಶಂಕರಗೌಡ ಪಾಟೀಲ, ರಾಮನಗೌಡ ಪಾಟೀಲ, ಬಸವರಾಜ ಅಕ್ಕೂರ, ರುದ್ರಮುನಿ ಹುಚ್ಚಯ್ಯನವರಮಠ, ಹನುಮಂತಪ್ಪ ತಳವಾರ, ನಿಂಗಪ್ಪ ಕಳಸೂರ, ಶಂಕರನಿಂಗಪ್ಪ ಮುದ್ದಲಿಂಗಣ್ಣವರ, ಯಲ್ಲಪ್ಪ ಹೊಂಡದ, ಕರವೇ ತಾಲೂಕಾಧ್ಯಕ್ಷ ಪರಶುರಾಮ ಈಳಗೇರ, ಕರವೇ ರೈತ ಮೋರ್ಚಾ ತಾಲೂಕಾಧ್ಯಕ್ಷ ರಾಮಣ್ಣ ಅಗಸರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net