

ಚಿತ್ರದುರ್ಗ: ಸರ್ಕಾರಿ ಕಾರ್ಯಕ್ರಮಗಳಲ್ಲಿ ಕುವೆಂಪು ರಚಿತ ಜಯಭಾರತ ಜನನಿಯ ತನುಜಾತೆ ಕವನವನ್ನು ನಾಡಗೀತೆಯಾಗಿ ಹಾಡುವುದನ್ನು ಕಡ್ಡಾಯಗೊಳಿಸಿದ್ದು ಮಾಜಿ ಮುಖ್ಯ ಮಂತ್ರಿ ಎಸ್.ಎಂ. ಕೃಷಂ್ಣ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಕೃಷ್ಣ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಕೃಷ್ಣ ಅವರು ಕಾಂಗ್ರೆಸ್ಸಿನಲ್ಲಿದ್ದ ಅವಧಿಯಲ್ಲಿ ನಾಲ್ಕು ಸದನಗಳ ಸದಸ್ಯರಾಗಿ, ಮುಖ್ಯಮಂತ್ರಿ, ಕೇಂದ್ರ ಸಚಿವ, ರಾಜ್ಯಪಾಲರಾಗಿ ಸಲ್ಲಿಸಿದ ಸೇವೆ ಸ್ಮರಣೀಯ ಎಂದರು.
ಡಿಸಿಸಿ ಕಾರ್ಯಾಧ್ಯಕ್ಷ ಕೆ.ಎಂ. ಹಾಲಸ್ವಾಮಿ ಮಾತನಾಡಿ, ಕೃಷ್ಣ ಅವರು ಜನಪರ ಕಾರ್ಯಕ್ರಮಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ ಎಂದರು.
ಗ್ಯಾರೆಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಆರ್. ಶಿವಣ್ಣ ಮಾತನಾಡಿ, ಕೃಷ್ಣ ಪಕ್ಷಾತೀತವಾಗಿ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದರು ಎಂದರು. ಜಿ.ಪಂ. ಮಾಜಿ ಸದಸ್ಯ ಪ್ರಕಾಶಮೂರ್ತಿ ಮಾತನಾಡಿ, ಎಸ್‌ಎಂಕೆ ಒಳ ಮೀಸಲಾತಿ ಜಾರಿಗೆ ಪ್ರಯತ್ನಿಸಿದ್ದರು ಎಂದರು.
ಮುಖಂಡರಾದ ಜಿ.ಎಸ್.ಕುಮಾರ್‌ಗೌಡ, ಡಿ.ಟಿ. ವೆಂಕಟೇಶ್, ಡಿ.ಎನ್. ಮೈಲಾರಪ್ಪ, ಮುದಸಿರ್ ನವಾಜ್, ಯು.ಲಕ್ಷ್ಮೀಕಾಂತ್, ಸೈಯದ್ ವಲಿ ಖಾದ್ರಿ ಜಿಪಂ ಉಪಾಧ್ಯಕ್ಷ ಕೆ. ಪಾಪಯ್ಯ, ಕೆ.ಪಿ. ಸಂಪತ್‌ಕುಮಾರ್, ಜಿ.ವಿ. ಮಧುಗೌಡ, ಬಿ. ರಾಜಣ್ಣ, ಸೈಯದ್ ಮೋಹಿದ್ದಿನ್, ಮಂಜುನಾಥ್, ಚಾಂದ್‌ಪೀರ್, ರೇಣುಕ ಶಿವು, ಡಿ. ಕುಮಾರ್‌ಪಿಳ್ಳೇಕೆರನಹಳ್ಳಿ, ಕಣ್ಮೇಶ್, ಚೋಟು ಇದ್ದರು.