ರಾಜ್ಯ ಚೆಸ್ ತಂಡಕ್ಕೆ ತೀರ್ಥಹಳ್ಳಿಯ ಪಾವನಿ ಆಯ್ಕೆ

TTH WWWEEEEBBB
Published on

ತೀರ್ಥಹಳ್ಳಿ: ಶಿಕ್ಷಣ ಇಲಾಖೆಯ 14 ವರ್ಷದೊಳಗಿನ ರಾಷ್ಟ್ರ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ರಾಜ್ಯ ತಂಡಕ್ಕೆ ಪಟ್ಟಣದ ಸೇವಾ ಭಾರತಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಆರ್.ಪಾವನಿ ಆಯ್ಕೆಯಾಗಿದ್ದಾಳೆ. ಕಾರವಾರದಲ್ಲಿ ನಡೆದ ರಾಜ್ಯ ಮಟ್ಟದ 14 ವರ್ಷದೊಳಗಿನ ಚೆಸ್ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯ ತಂಡಕ್ಕೆ ಆಯ್ಕೆಯಾದ ಐವರಲ್ಲಿ ಪಾವನಿ ಒಬ್ಬಳು. ಕಬಡ್ಡಿ ಮತ್ತು ವಾಲಿಬಾಲ್‌ನಲ್ಲೂ ಪಾವನಿ ಉತ್ತಮ ಸಾಧನೆ ಮಾಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net