

ಚಿತ್ರದುರ್ಗ: ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ವಿವಿಧ ಕ್ರೀಡಾಕೂಟಗಳಲ್ಲಿ ಜಿಲ್ಲಾ ಹಾಗೂ ವಿಭಾಗ ಮಟ್ಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆೆದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
17 ವರ್ಷದೊಳಗಿನ ಬಾಲಕರ ವಿಭಾಗದ ಟೇಬಲ್ ಟೆನ್ನಿಸ್‌ನಲ್ಲಿ ಸಿ.ಪುನಿತ್, ಬಾಲಸುಬ್ರಮಣ್ಯ, ಕೆ.ಆರ್.ಕಿಶನ್ ತಂಡ, ಟೇಬಲ್ ಟೆನ್ನಿಸ್‌ನಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
14 ವರ್ಷ ದೊಳಗಿನ ಬಾಲಕರ ವಿಭಾಗದ ಕ್ರಿಕೆಟ್ ಕ್ರೀಡಾಕೂಟದಲ್ಲಿ ಜೈನೇಶ್ ಚೋಪ್ರ, ಹೃತ್ವಿಕ್, ಎಚ್.ಎಂ.ನಂದೀಶ್ ಜಿಲ್ಲಾ ಮಟ್ಟದಿಂದ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
17ವರ್ಷದೊಳಗಿನ ಬಾಲಕರ ವಿಭಾಗದ ಕ್ರಿಕೆಟ್‌ನಲ್ಲಿ ಅಬ್ದುಲ್ ರಹೀಂ ಮತ್ತು ದಯಾಸಾಗರ್ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನದೊಂದಿಗೆ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದ್ವಿತೀಯ ಸ್ಥಾನ ಪಡೆದ ದಯಾಸಾಗರ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 14 ವರ್ಷದೊಳಗಿನ ಬಾಲಕರ ಹಾಕಿ ಸ್ಪರ್ಧೆಯಲ್ಲಿ ಉಮಾಶಂಕರ್ ತಂಡ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟದಲ್ಲಿ ಭಾಗವಹಿಸಿದೆ. 14 ವರ್ಷದೊಳಗಿನ ಬಾಲಕಿಯರ ವಿಭಾಗದ ಹಾಕಿ ಸ್ಪರ್ಧೆಯಲ್ಲಿ ಸಿಂಚನಾ ತಂಡ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪ ಡೆದಿದೆ. ಪ್ರಜ್ಞಾ,ಸಿಂಚನಾ ಮತ್ತು ಪೂರ್ವಿಕ ವಿಭಾಗ ಮಟ್ಟದಲ್ಲಿ ಭಾಗವಹಿಸಿದ್ದಾರೆ. 17ವರ್ಷದೊಳಗಿನ ಬಾಲಕರ ವಿಭಾಗದ ಹಾಕಿಯಲ್ಲಿ ವರ್ದೇಶ್ ತಂಡ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟದಲ್ಲಿ ಭಾಗವಹಿಸಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆ ಕಾರ‌್ಯದರ್ಶಿ ಬಿ.ವಿಜಯಕುಮಾರ್,ನಿರ್ದೇಶಕರಾದ ಎಸ್.ಎಂ ಪೃಥ್ವೀಶ್, ಪಿ.ಸಿ.ಸುನೀತಾ ಹರ್ಷ ವ್ಯಕ್ತಪಡಿಸಿದ್ದಾರೆ.