

ಬೀದರ್: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅವರನ್ನು ಸಂಘದ ರಾಜ್ಯ ಉಪಾಧ್ಯಕ್ಷರಾಗಿ ನಾಮ ನಿರ್ದೇಶನ ಮಾಡಿದ್ದಕ್ಕೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಗಂದಗೆ ಅವರು ಸಂಘದ ಜಿಲ್ಲಾ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ನೌಕರರ ಅನೇಕ ಬೇಡಿಕೆಗಳ ಈಡೇರಿಕೆ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಸಂಘದ ರಾಜ್ಯ ಅಧ್ಯಕ್ಷರು ಅವರನ್ನು ಉಪಾಧ್ಯಕ್ಷರಾಗಿ ನಾಮನಿರ್ದೇಶನ ಮಾಡಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಬಿಜೆಪಿ ಬೀದರ್ ನಗರ ಘಟಕದ ಉಪಾಧ್ಯಕ್ಷ ಸಂಜು ಪಾಟೀಲ ಗೌಡಗಾಂವ್, ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ, ಮುಖಂಡರಾದ ರಾಜೇಂದ್ರ ಜೊನ್ನಿಕೇರಿ, ಸುರೇಶ ಸ್ವಾಮಿ, ರವಿ ಪಾಪಡೆ, ನಾಗಶೆಟ್ಟಿ ಶೆಟಕಾರ್, ಸಿದ್ದು ಶೆಟಕಾರ್, ವಿವೇಕಾನಂದ ಪಟ್ನೆ, ರಾಜು ಕಮಠಾಣೆ, ಪ್ರಕಾಶ ನಿಂಬೂರೆ ತಿಳಿಸಿದ್ದಾರೆ.