

ಹುಮನಾಬಾದ್: ಲೋಕಕಲ್ಯಾಣಕ್ಕಾಗಿ ಮತ್ತು ದಸರಾ ಮಹೋತ್ಸವ ನಿಮಿತ್ತ ಶ್ರೀ ಅನ್ನಪೂರ್ಣೇಶ್ವರಿ ದೇವಿ ಮಹಿಳಾ ಟ್ರಸ್ಟ್ನಿಂದ ಸಮಾಜ ಮುಖಿ ಕಾರ್ಯ ಶ್ಲಾಘನೀಯ ಎಂದು ಯೋಗಿತಾ ಪಾಟೀಲ್ ಹೇಳಿದರು.
ಪಟ್ಟಣದ ಹೊರವಲಯದ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಿ ಮಹಿಳಾ ಟ್ರಸ್ಟ್ನಿಂದ ದಸರಾ ಮಹೋತ್ಸವ ನಿಮಿತ್ತ ಭಾನುವಾರ ಆಯೋಜಿಸಿದ್ದ ಲಲಿತ ಸಹಸ್ರನಾಮ ಹೋಮ, ಹವನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಟ್ರಸ್ಟ್ ತಾಲೂಕು ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ್ ಮಾತನಾಡಿ, ಲೋಕಕಲ್ಯಾಣ ಮತ್ತು ಸರ್ವರಿಗೂ ಸುಖಶಾಂತಿ ನೆಮ್ಮದಿ ಪ್ರಾಪಿಯಾಗಲಿ ಎಂದು ಹಾರೈಸಿ, ದಸರಾದ ಒಂಬತ್ತು ದಿನ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಲಲಿತಾ ಸಹಸ್ರನಾಮ ಹೋಮ, ಹವನ ಆಯೋಜಿಸಿದ್ದು, ಮುತ್ತೈದೆಯರು ಭಾಗವಹಿಸಬೇಕು ಎಂದರು.
ಟ್ರಸ್ಟ್ ಕಾರ್ಯದರ್ಶಿ ಸುರೇಖಾ ವಿಭೂತಿ, ಕೋಶಾಧ್ಯಕ್ಷೆ ಸುಧಾರಾಣಿ ಪೂಜಾರಿ, ಸದಸ್ಯರಾದ ಅನಿತಾ ಚಿದ್ರಿ, ಕವಿತಾ ವಿಭೂತಿ, ದ್ರೌಪದಿ ಶಮ್‌ಶಾಬಾದೆ, ವಿಮಲಾ ಸಂಗಮಕರ್, ಅನೀತಾ ಇತರರಿದ್ದರು.