ರಾಜೀವ್ ಗಾಂಧಿ ವಿವಿ ಟೆನ್ನಿಸ್ ಟೂರ್ನಿ: ಮಂಗಳೂರು, ಹುಬ್ಬಳ್ಳಿ ಕಾಲೇಜುಗಳಿಗೆ ಪಾರಿತೋಷಕ

IMG-20220914-WA0057.jpg
Published on

ದಾವಣಗೆರೆ: ಮಂಗಳೂರಿನ ಎಜೆಐಎಂಎಸ್ ಕಾಲೇಜು, ಹುಬ್ಬಳ್ಳಿ ಯ ಸರ್ಕಾರಿ ಶುಶ್ರೂಷಾ ಕಾಲೇಜು ಕ್ರಮವಾಗಿ ನಗರದ ಕಾಲೇಜ್ ಆಫ್ ಡೆಂಟಲ್ ಸೈನ್ಸ್‌ನಲ್ಲಿ ಬುಧವಾರ ಮುಕ್ತಾಯಗೊಂಡ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಟೆನ್ನಿಸ್ ಪಂದ್ಯಾವಳಿಯಲ್ಲಿ ಪುರುಷರು ಮತ್ತು ಮಹಿಳಾ ವಿಭಾಗದ ಪಾರಿತೋಷಕ ಪಡೆದವು.

ಎರಡೂ ವಿಭಾಗದಲ್ಲಿ ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನ ತಂಡಗಳು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಡಬೇಕಾಯಿತು.

ಸಿಬ್ಬಂದಿ ವಿಭಾಗ: ಪುರುಷರ ಸಿಂಗಲ್ಸ್ ನಲ್ಲಿ ಜೆಜೆಎಂಎಂಸಿ ಯ ಆರ್ಥೋಪೆಡಿಕ್ ಸರ್ಜನ್ ಡಾ. ಪೌಧಾನ್, ಮಂಡ್ಯದ ಇನ್ಸಿಟ್ಯೂಟ್ ಆಪ್ ಮೆಡಿಕಲ್ ಸೈನ್ಸಸ್ ನ ಡಾ.ಮಹೇಂದ್ರಕುಮಾರ್, ಮಹಿಳಾ ವಿಭಾಗದಲ್ಲಿ ಜೆಜೆಎಂಎಂಸಿಯ ಡಾ.ರಜಿನಿ ಹಾಗೂ ಡಾ.ಮಾಧವಿ ಕ್ರಮವಾಗಿ ಬಹುಮಾನ ಪಡೆದರು.

ಪುರುಷರ ವಿಭಾಗದ ಡಬಲ್ಸ್ ನಲ್ಲಿ ದಾವಣಗೆರೆಯ ಇನ್‌ಸ್ಟಿಟ್ಯೂಟ್ ಆಪ್ ಫಾರ್ಮಾಕ್ಯೂಟಿಕಲ್ಸ್ ಸೈನ್ಸ್, ಜೆಜೆಎಂಸಿಸಿ ಕಾಲೇಜು ಕ್ರಮವಾಗಿ ಬಹುಮಾನ ಪಡೆದರೆ, ಮಹಿಳಾ ವಿಭಾಗದಲ್ಲಿ ದಾವಣಗೆರೆಯ ಎಸ್ಎಸ್ಐಎಂಎಸ್, ಕಾಲೇಜ್ ಆಪ್ ಡೆಂಟಲ್ ಸೈನ್ಸ್ ಕ್ರಮವಾಗಿ ಬಹುಮಾನ ಪಡೆದವು. ಸಂಜೆ

ನಡೆದ ಸಮಾರೋಪದಲ್ಲಿ ಕಾಲೇಜ್ ಆಫ್ ಡೆಂಟಲ್ ಸೈನ್ಸ್‌ನ ಪ್ರಾಧ್ಯಾಪಕ ಡಾ.ಶ್ರೀನಿಧಿ. ವಿಶ್ವವಿದ್ಯಾನಿಲಯದ ವೀಕ್ಷಕ ರಾಮಾಂಜಿನಪ್ಪ, ರಾಜೀವ್ ಗಾಂಧಿ ದೈಹಿಕ ಶಿಕ್ಷಣ ನಿರ್ದೇಶಕ ವಿಷ್ಣು ಬಹುಮಾನ ವಿತರಿಸಿದರು. ಗೋಪಾಲಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net