ರಾಜೀ ಸಂಧಾನ : ೨೭೩೭೬ ಪ್ರಕರಣಗಳು ಇತ್ಯರ್ಥ

bkt-15-3
Published on

ಬಾಗಲಕೋಟೆ: ಜಿಲ್ಲಾ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ ೭೧೫೧ ಪೈಕಿ ೪೮೧೯ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ೨೪೧೦೭ ಪೈಕಿ ೨೨೫೫೭ ಪ್ರಕರಣಗಳು ಸೇರಿ ಒಟ್ಟು ೨೭೩೭೬ ಪ್ರಕರಣಗಳನ್ನು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು.

ಶನಿವಾರ ಪ್ರಧಾನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ವಿ.ವಿಜಯ ಅವರ ನೇತೃತ್ವದಲ್ಲಿ ಜಿಲ್ಲೆ ಹಾಗೂ ಅಧೀನ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು ೩೧೨೫೮ ಪ್ರಕರಣಗಳ ಪೈಕಿ ೨೭೩೭೬ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು. ಒಟ್ಟು ೨೫.೧೧ ಕೋಟಿ ರೂ.ಗಳ ಈ ಎಲ್ಲ ಪ್ರಕರಣದ ಮೊತ್ತವಾಗಿದೆ.

ಜಿಲ್ಲಾ ನ್ಯಾಯಾಲಯದಲ್ಲಿರುವ ಬಾಕಿ ಇರುವ ೧೪೭೧ ಪೈಕಿ ೧೧೮೬ ಪ್ರಕರಣಗಳುಇತ್ಯರ್ಥ್ಯಗೊಂಡರೆ, ಬೀಳಗಿ ನ್ಯಾಯಾಲಯದಲ್ಲಿ ೧೩೦ ಪೈ ೧೮೮, ಮುಧೋಳ ನ್ಯಾಯಾಲಯದಲ್ಲಿ ೫೫೭ ಪೈಕಿ ೪೫೬, ಬನಹಟ್ಟಿ ನ್ಯಾಯಾಲಯದಲ್ಲಿ ೧೩೬೪ ಪೈಕಿ ೫೩೧, ಹುನಗುಂದ ನ್ಯಾಯಾಲಯದಲ್ಲಿ ೪೭೮ ಪೈಕಿ ೩೪೬, ಇಳಕಲ್ಲ ನ್ಯಾಯಾಲಯದಲ್ಲಿ ೩೯೨ ಪೈಕಿ ೩೨೩, ಜಮಖಂಡಿ ನ್ಯಾಯಾಲಯದಲ್ಲಿ ೨೦೨೮ ಪೈಕಿ ೧೨೬೩ ಹಾಗೂ ಬಾದಾಮಿ ನ್ಯಾಯಾಲಯದಲ್ಲಿ ೭೩೧ ಪೈಕಿ ೬೨೬ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

ಬಾಕಿ ಇರುವ ಪ್ರಕರಣಗಳಲ್ಲಿ ಜನನ ಮತ್ತು ಮರಣ ನೋಂದಣಿಗೆ ಸಂಬಂಧಿಸಿದ ೭೭೦ ಪ್ರಕರಣಗಳ ಪೈಕಿ ೬೮೩ ಇತ್ಯರ್ಥ ಪಡಿಸಲಾಯಿತು. ಪೆಟ್ಟಿ ಪ್ರಕರಣಕ್ಕೆ ಸಂಬಂಧಿಸಿದ ೩೪೬೩ ಪೈಕಿ ೩೪೩೦ ಪ್ರಕರಣಗಳು ಇತ್ಯರ್ಥಗೊಂಡು ೩.೫೯ ಲಕ್ಷ ರೂ.ಗಳಿಗೆ ನಿಗದಿಪಡಿಸಲಾಯಿತು. ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಬ್ಯಾಂಕಿಗೆ ಸಂಬಂಧಿಸಿದ ೧೬೮೯ ಪೈಕಿ ೧೨೪ ಇತ್ಯರ್ಥಗೊಂಡು ೧.೭೫ ಕೋಟಿಗೆ ನಿಗದಿಪಡಿಸಲಾಯಿತು. ವಿದ್ಯುತ್‌ಗೆ ಸಂಬಂಧಿಸಿದ ೧೫೪ ಪೈಕಿ ೧೫೪ ಇತ್ಯರ್ಥಗೊಂಡು ೩.೩೯ ಲಕ್ಷಕ್ಕೆ ನಿಗದಿಯಾದರೆ, ಸಂಚಾರಿ ನಿಯಮ ಉಲ್ಲಂಘನೆ ಸಂಬಂಧಿಸಿದ ೭೮೧೨ ಪೈಕಿ ೭೮೧೨ ಪ್ರಕರಣ ಇತ್ಯರ್ಥಗೊಂಡು ೨೫.೯೯ ಲಕ್ಷ ರೂ.ಗಳಿಗೆ ನಿಗದಿಪಡಿಸಲಾಯಿತು. ಆಸ್ತಿ ತೆರಿಗೆಗೆ ಸಂಬಂಧಿಸಿದ ೧೪೦೬೪ ಪೈಕಿ ೧೪೦೬೪ ಇತ್ಯರ್ಥಗೊಂಡು ೩.೫೩ ಕೋಟಿ ರೂ.ಗಳಿಗೆ ಸೆಟೆಲ್‌ಮೆಂಟ್ ಮಾಡಲಾಯಿತು.

ಜಿಲ್ಲೆ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ಒಟ್ಟು ೧೦ ಜೋಡಿಗಳನ್ನು ರಾಜಿ ಸಂಧಾನದ ಮೂಲಕ ಒಂದು ಮಾಡಲಾಯಿತು. ಒಂದಾದ ಜೋಡಿಗಳು ಪರಸ್ಪರ ಹಾರಗಳನ್ನು ಬದಲಾಯಿಸುವ ಮೂಲಕ ಸಿಹಿ ಹಂಚಲಾಯಿತು

ಲೋಕ ಅದಾಲತ್‌ನಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಎಸ್.ಬಿ.ರೆಹಮಾನ, ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ.ಎ.ಮೂಲಿಮನಿ, ಜಿಲ್ಲಾ ಕುಟುಂಬ ನ್ಯಾಯಾಧೀಶ ಕೃಷ್ಣಮೂರ್ತಿ ಪಡಸಲಗಿ, ಪ್ರಧಾನ ಹಿರಿಯ ನ್ಯಾಯಾಧೀಶರು ಹಾಗೂ ಸಿಜೆಎಂ ಹೇಮಾ ಪಸ್ತಾಪೂರ, ೧ನೇ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾಧೀಶ ಮಹೇಶ ಪಾಟೀಲ, ೨ನೇ ಹೆಚ್ಚುವರಿ ಹಿರಿಯ ನ್ಯಾಯಾಧೀಶ ರಾಜಶೇಖರ ತಿಳಗಂಜಿ, ಪ್ರಧಾನ ದಿವಾಣಿ ನ್ಯಾಯಾಧೀಶ ಮುರಗೇಂದ್ರ ತುಬಾಕೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ, ಜಿಲ್ಲಾ ನ್ಯಾಯಾಲಯದ ಆಡಳಿತಾಧಿಕಾರಿ ಎಂ.ಎಚ್.ಕಡಕೋಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net