ರಾಜಿ ಸಂಧಾನ ಮೂಲಕ ವ್ಯಾಜ್ಯ ಪರಿಹರಿಸಿಕೊಳ್ಳಲಿ

12Rayabag2
Published on

ರಾಯಬಾಗ: ಪಕ್ಷಗಾರರು ತಮ್ಮ ವ್ಯಾಜ್ಯಗಳನ್ನು ರಾಜಿ ಸಂಧಾನ ಮೂಲಕ ಬಗೆಹರಿಸಿಕೊಂಡು ನೆಮ್ಮದಿಯಿಂದ ಜೀವನ ನಡೆಸಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ ಹೇಳಿದರು.

ಪಟ್ಟಣದ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೋಕ ಅದಾಲತ್‌ನಲ್ಲಿ ಪ್ರಕರಣಗಳನ್ನು ಸಂಧಾನ ಮೂಲಕ ಇತ್ಯರ್ಥಪಡಿಸಿ ಮಾತನಾಡಿ, ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ಸೇರಿ ಒಟ್ಟು ೧೯೫೫ ಪ್ರಕರಣಗಳನ್ನು ಸಂಧಾನ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದರು.

ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಸಂಜು ಮತ್ತು ರೇಷ್ಮಾ ಪಾತ್ರೋಟ ದಂಪತಿಯನ್ನು ಒಂದುಗೂಡಿಸಿ ಶುಭ ಹಾರೈಸಿದರು.ವಕೀಲರಾದ ಸಾಗರ ಶ್ರೀಗೊಂಡ, ಆರ್.ಬಿ.ಕೊರವಿ, ಬಿ.ಕೆ.ಶಿಂಗಾಡಿ, ಪಿ.ಎಸ್.ಕುರಬೇಟ, ಸುರೇಶ ಚಿಗರಿ, ಕೆ.ಎಲ್.ಕೆರೂರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net