

ದಾವಣಗೆರೆ: ತೆಲಂಗಾಣ ರಾಜ್ಯದ ಗೋಶಾಮಹಲ ಶಾಸಕ ಟಿ.ರಾಜಾಸಿಂಹಗೆ ರಕ್ಷಣೆ ಒದಗಿಸಬೇಕು. ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿ ಹಿಂದು ರಾಷ್ಟ್ರ ಸೇನೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
ಒಂದು ಪಂಥದ ಶ್ರದ್ಧಾಕೇಂದ್ರಗಳನ್ನು ಅಪಮಾನ ಮಾಡಿದ್ದಾರೆಂದು ಆರೋಪಿಸಿ ಬಂಧಿಸಿಲ್ಪಟ್ಟಿದ್ದ ರಾಜಾಸಿಂಹ ಅವರು ಜಾಮೀನಿನಮೇಲೆ ಬಿಡುಗಡೆಯಾಗಿದ್ದು, ಇನ್ನೊಂದು ಪ್ರಕರಣದಲ್ಲಿ ಸಿಲುಕಿಸುವ ಹುನ್ನಾರ ನಡೆದಿದೆ. ಅಲ್ಲದೇ ಕೊಲೆ ಬೆದರಿಕೆ ಬರುತ್ತಿದ್ದು, ಅವರಿಗೆ ತೆಲಂಗಾಣ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ಜಿಹಾದಿ ಮನಸ್ಸಿನ ಶಾಸಕರು, ಸಂಘಟನೆಗಳ ಪದಾಧಿಕಾರಿಗಳು ನೇರವಾಗಿ ಕಾನೂನನ್ನೇ ಕೈಗೆತ್ತಿಕೊಳ್ಳುವಂತೆ ಪ್ರಚೋದಿಸುತ್ತಿದ್ದಾರೆ.
ಆದರೂ ಪೊಲೀಸರು ಕಾರ್ಯಾಚರಣೆ ನಡೆಸುತ್ತಿಲ್ಲ. ತೆಲಂಗಾಣ ಸರ್ಕಾರ ಪಕ್ಷಪಾತ ಮಾಡುತ್ತಿದೆ.
ಹೀಗಾಗಿ ರಾಜಾಸಿಂಹ ಅವರ ಮೇಲಿನ ವ್ಯಾಜ್ಯಗಳನ್ನು ಕರ್ನಾಟಕ, ಗೋವಾ ಅಥವಾ ಮಹಾರಾಷ್ಟ್ರ ಸರ್ಕಾರಕ್ಕೆ ವರ್ಗಾಯಿಸಬೇಕು. ತನಿಖೆ ನಡೆಸಿ ಕ್ರಮ ವಹಿಸಬೇಕೆಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ರಾಜ್ಯ ವಕ್ತಾರ ಕೆ.ಎನ್.ಸಂದೀಪ್, ಪ್ರಮುಖರಾದ ಶ್ರೀಕಾಂತ್, ರಾಘವೇಂದ್ರ ಗುರೂಜಿ, ಗಣೇಶ್,ಗುರುಬಸವ, ಪ್ರಭಾಕರ್ ಇತರರಿದ್ದರು.