ರಾಜಾಪುರದಲ್ಲಿ ಕುರುಬ ಸಂಘದ ಆಸ್ತಿ

guru
Published on

ಕಲಬುರಗಿ: ನಗರದ ರಾಜಾಪುರದಲ್ಲಿನ ಶ್ರೀ ಭೀರಲಿಂಗೇಶ್ವರ ವಸತಿ ನಿಲಯ, ಭೀರಲಿಂಗೇಶ್ವರ ದೇವಸ್ಥಾನ ಸೇರಿ ಒಟ್ಟು ೩.೭ ಎಕರೆ ಜಮೀನು ಕರ್ನಾಟಕ ಪ್ರದೇಶ ಕುರುಬ ಸಂಘದ ಅಧಿನದಲ್ಲಿಯೇ ಇದೆ. ಅದನ್ನೇ ಸರ್ಕಾರ ಆ.೨೨ರಂದು ಸಚಿವ ಸಂಪುಟದಲ್ಲಿಟ್ಟು ಕುರುಬ ಸಂಘಕ್ಕೆ ಅಧಿಕೃತವಾಗಿ ಹೆಸರಿಗೆ ಮಂಜೂರು ಮಾಡಲು ಒಪ್ಪಿಗೆ ನೀಡಿದೆ ಎಂದು ಸಂಘದ ಅಧ್ಯಕ್ಷ ಗುರುನಾಥ ಪೂಜಾರಿ ತಿಳಿಸಿದರು.
ರಾಜಾಪುರದ ಸರ್ವೆ ೭, ೮/೧ ಅಡಿಯಲ್ಲಿ ಜಮೀನು ಇದ್ದು, ಅಲ್ಲಿ ನೂರಾರು ವರ್ಷದಿಂದ ಭೀರಲಿಂಗೇಶ್ವರ ಸೇರಿ ಕುರುಬ ಸಮಾಜದ ದೇವರ ದೇವಸ್ಥಾನಗಳಿವೆ. ಎಲ್ಲ ಇಲಾಖೆಗಳ ದಾಖಲೆ, ಪರಿಶೀಲನೆ ನಡೆಸಿ, ಸಮಾಜದ ಭೂಮಿ ಸಮಾಜಕ್ಕೆ ಕೊಡಲಾಗಿದೆ. ವಿನಾ ಯಾವುದೇ ಶಿಕ್ಷಣ ಸಂಸ್ಥೆಯದ್ದು ಅಲ್ಲ. ಸರ್ಕಾರದ ಮೇಲೆ ೨೦ ವರ್ಷದಿಂದ ಒತ್ತಡ ಹೇರುವುದು, ಮನವಿ ಮಾಡಿದ್ದರಿಂದ ಇದೀಗ ಸಂಘಕ್ಕೆ ಕೊಡಲು ಒಪ್ಪಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಮಾಜದ ಭೂಮಿಯಲ್ಲಿ ದ್ವಾರಬಾಗಿಲು ಸೇರಿ ವಿವಿಧ ಅಭಿವೃದ್ಧಿ ಮಾಡಲಾಗುತ್ತಿದೆ. ಜಮೀನು ಹೆಸರಿಗೆ ಮಾಡಿರುವ ಸಚಿವ ಸಂಪುಟ, ಸಿಎಂ ಸಿದ್ದರಾಮಯ್ಯ ಅವರಿಗೆ ಸೆಪ್ಟೆಂಬರ್‌ನಲ್ಲಿ ಅಭಿನಂದನಾ ಸಮಾರಂಭ ನಡೆಸಲಾಗುವುದು ಎಂದು ತಿಳಿಸಿದರು.
ರವಿಗೊಂಡ ಕಟ್ಟಿಮನಿ, ಶಿವಲಿಂಗಪ್ಪ ವಗ್ಗಿ, ತಿಪ್ಪಣ್ಣ ರಾವೂರ, ನಾಗೇಂದ್ರಪ್ಪ ಪೂಜಾರಿ, ಮಹೇಶ ಧರಿ, ನಾಗೇಶ ಮುಚಖೇಡ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net