‌ರಾಜಶೇಖರಪ್ಪಗೆ ಪ್ರೊ.ಶಿ.ಚೆ.ನಂದೀಮಠ ಪ್ರಶಸ್ತಿ

Dr.B.Rajashekarappa
Published on

ಚಿತ್ರದುರ್ಗ: ಧಾರವಾಡದಲ್ಲಿ ಈಚೆಗೆ ಜರುಗಿದ ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತಿನ ಪ್ರಥಮ ಮಹಾಧಿವೇಶನದಲ್ಲಿ ಚಿತ್ರದುರ್ಗದ ಶಾಸನ-ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅವರಿಗೆ ಪ್ರೊ.ಶಿ.ಚೆ.ನಂದೀಮಠ ಶಾಸನ ಸಾಹಿತ್ಯ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಹಾಧೀವೇಶನದ ಸರ್ವಾಧ್ಯಕ್ಷ ಡಾ.ಡಿ.ವಿ.ಪರಮಶಿವಮೂರ್ತಿ, ಪರಿಷತ್ತಿನ ಅಧ್ಯಕ್ಷೆ ಹನುಮಾಕ್ಷಿ ಗೋಗಿ, ಉಪಾಧ್ಯಕ್ಷ ಡಾ.ಶರಣಗೌಡ ಪಾಟೀಲ, ಡಾ.ಮಹಾದೇವಿ ಹಿರೇಮಠ, ಡಾ.ಬಿ.ವಿ.ಶಿರೂರ, ಪ್ರೊ.ಎಸ್.ಬಿ.ಹಿರೇಮಠ, ಡಾ.ಲಕ್ಷ್ಮಣ್ ತೆಲಗಾವಿ, ಜನತಾ ಶಿಕ್ಷಣ ಸಮಿತಿಯ ಡಾ.ಅಜಿತ್‌ಪ್ರಸಾದ್, ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net