ರಾಜರಾಜೇಶ್ವರಿ ಸನ್ನಿಧಾನಕ್ಕೆ ಸಂಸದರ ಭೇಟಿ

Karajola
Published on

ಚಿತ್ರದುರ್ಗ: ತಾಲೂಕಿನ ಗೋನೂರು ಗ್ರಾಮದ ರಾಜರಾಜೇಶ್ವರಿ ದೇವಿಯ ಸನ್ನಿಧಾನಕ್ಕೆ ಗುರುವಾರ ಸಂಸದ ಗೋವಿಂದ ಎಂ ಕಾರಜೋಳ ಅವರು ಭೇಟಿ ನೀಡಿದರು. ಇದೇ ವೇಳೆ ದೇಗುಲದಲ್ಲಿನ ಸುಂದರ ಪರಿಸರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜರಾಜೇಶ್ವರಿ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ನಾಗರಾಜ ಭಟ್ಟರು ಸಂಸದರನ್ನು ಸನ್ಮಾನಿಸಿದರು. ಕಾರ್ಯದರ್ಶಿ ಅನಂತ ಭಟ್ರು, ಪಿವಿಎಸ್‌ ಆಸ್ಪತ್ರೆಯ ಮುಖ್ಯಸ್ಥ ಡಾ.ಶ್ರೀಧರ್‌ಮೂರ್ತಿ, ಉದ್ಯಮಿಗಳಾದ ಕಾಶಿ ವಿಶ್ವನಾಥ ಶ್ರೇಷ್ಠಿ, ಕಂಠೇಶ್ವರ, ಬಿಜೆಪಿ ಮುಖಂಡ ಬದ್ರಿನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net