

ಹೊಸಪೇಟೆ: ರಾಜಕೀಯ ಗಾಳವಾಗಿ ಎಲ್ಲಾ ರಾಜಕೀಯ ಪಕ್ಷಗಳು ಒಳ ಮೀಸಲಾತಿಯ ಲಾಭ ಪಡೆಯುತ್ತಿವೆ. ಈ ಬಾರಿ ಅನುಷ್ಠಾನವಾಗದಿದ್ದರೆ ಉಗ್ರ ಹೋರಾಟಕ್ಕೆ ಅಣಿಯಾಗುತ್ತಿದ್ದೇವೆ ಎಂದು ವಿಜಯನಗರ ಜಿಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಗೌರವ ಅಧ್ಯಕ್ಷ ಎಂ.ಸಿ.ವೀರಸ್ವಾಮಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ಮಾತನಾಡಿದ ಅವರು, ಚುನಾವಣೆ ಎದುರಾಗುತ್ತಿದ್ದಂತೆಯೇ ಎಲ್ಲಾ ರಾಜಕೀಯ ಪಕ್ಷಗಳು ಒಳ ಮೀಸಲಾತಿ ಹೆಸರು ತೆಗೆದು ಲಾಭ ಪಡೆಯುತ್ತಿವೆ. ಅಧಿಕಾರಕ್ಕೆ ಬರುತ್ತಿದ್ದಂತಯೇ ನಮ್ಮನ್ನು ನಿರ್ಲಕ್ಷ್ಯಸುತ್ತಿವೆ. ಸಿಎಂ ಸಿದ್ಧರಾಮಯ್ಯ ಇದಕ್ಕೆ ಹೊರಾಗಿಲ್ಲಾ. 6ನೇ ಗ್ಯಾರಂಟಿಯಾಗಿ ಒಳ ಮೀಸಲಾತಿ ಅನುಷ್ಠಾನಕ್ಕೆ ತರುವುದಾಗಿ ತಿಳಿಸಿದ್ದರು. ಈ ವರೆಗೂ ಜಾರಿಗೆ ತಂದಿಲ್ಲಾ. ಈ ಭಾರಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿಗೆ ಒಪ್ಪಿಗೆ ಸೂಚಿಸದೇ ಹೋದರ ರಾಜ್ಯ ವ್ಯಾಪಿ ಹೋರಾಟ ಮಾಡುತ್ತೇವೆ. ಅದರ ಅಂಗವಾಗಿ ವಿಜಯನಗರ ಜಿಲ್ಲಾ ಬಂದ್ ಕೂಡ ಮಾಡುತ್ತೇವೆ ಎಂದರು.
ಈ ತಿಂಗಳ ಸಚಿವ ಸಂಪುಟ ಸಭೆಯ ಪೂರ್ವದಲ್ಲಿ ನಮ್ಮ ಮಾದಿಗ ಸಮಾಜದ ಮುಖಂಡರು ಸಭೆ ನಡೆಸಲಿದ್ದೇವೆ. ಈ ಅವಧಿಯಲ್ಲಿ ಸಚಿವ ಸಂಪುಟ ಅನುಮೋದನೆ ನೀಡದಿದ್ದರೆ ಹೋರಾಟದ ರೂಪರೇಷೆಗಳನ್ನು ಅಂತಿಮಗೊಳಿಸುವ ಹಾಗೂ ಪಕ್ಷಾತೀತವಾಗಿ ಸಚಿವರು, ಶಾಸಕರು ರಾಜಿನಾಮೆ ನೀಡಿ ಹೋರಾಟಕ್ಕಿಳಿಯಲು ತೀರ್ಮಾನಿಸಲಾಗುವುದು ಎಂದರು.
ಪ್ರಮುಖರಾದ ಸೇಲ್ವಂ, ಶೇಷು, ಕರಿಯಪ್ಪ, ಪಂಪಾಪತಿ, ಬಸವರಾಜ್, ರಾಮಾಂಜನೇಯ, ರಾಘವೇಂದ್ರ, ವೀರೇಶ್, ನಾಗರಾಜ್, ಭರತ್ ಕುಮಾರ ಮಾರೇಶ್ ಇತರರಿದ್ದರು.