ರಾಜಕೀಯ ಒತ್ತಡಕ್ಕೆ ಬಿ.ಪುಟ್ಟಸ್ವಾಮಿ ವರ್ಗಾವಣೆ?

21 kgl photo..2
Published on

ಚಾಮರಾಜನಗರ: ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಿ.ಪುಟ್ಟಸ್ವಾಮಿ ಅವರನ್ನು ರಾಜಕಾರಣಿಗಳ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಲಾಗಿದೆ ಎಂದು ಬಿ.ಪುಟ್ಟಸ್ವಾಮಿ ಅಭಿಮಾನಿ ಅಣಗಳ್ಳಿ ಬಸವರಾಜು ಆರೋಪಿಸಿದರು.

ಕೊಳ್ಳೇಗಾಲ ಪಟ್ಟಣದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಟಿ ಮಾತನಾಡಿದ ಅವರು, ಸರ್ಕಾರ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪುಟ್ಟಸ್ವಾಮಿ ಅವರನ್ನು ಮೈಸೂರಿನ ಡಿಸಿಐಇಗೆ ದಿಢೀರ್ ವರ್ಗಾವಣೆ ಮಾಡಿದ್ದಾರೆ. ಇದೇನಾದರೂ ಸಾಬೀತಾದರೆ ಅದರ ಪರಿಣಾಮವನ್ನು ಸಂಬಂಧಪಟ್ಟವರು ಎದುರಿಸಬೇಕಾಗುತ್ತದೆ ಎಚ್ಚರಿಸಿದರು.

ಗೋಷ್ಠಿಯಲ್ಲಿ ಮುಳ್ಳೂರು ಗ್ರಾ.ಪಂ.ಅಧ್ಯಕ್ಷೆ ರುಕ್ಕುರಮ್ಯ, ಬಸವರಾಜು, ಬಿ.ಪುಟ್ಟಸ್ವಾಮಿ ಅಭಿಮಾನಿ ಬಳಗದ ತಾಲೂಕಿ ಅಧ್ಯಕ್ಷ ಮನು, ಉಷಾರಾಣಿ ಮತ್ತು ಇತರರು ಹಾಜರಿದ್ದರು.

ನಾಳೆ ಧರಣೆ: ಇನ್ಸ್‌ಪೆಕ್ಟರ್ ಬಿ.ಪುಟ್ಟಸ್ವಾಮಿ ಅವರ ವರ್ಗಾವಣೆ ಯನ್ನು ಕೈಬಿಡಬೇಕು. ಯಥಾಸ್ಥಿತಿಯಾಗಿ ಅವರನ್ನು ಚಾಮರಾಜನಗರದಲ್ಲೆ ಮುಂದುವರೆಸಬೇಕು ಎಂದು ಜು.22 ರಂದು ವಿಭಾಗಾಧಿಕಾರಿ ಕಚೇರಿಯ ಮುಂದೆ ಸಾಂಕೇತಿಕವಾಗಿ ಧರಣಿ ನಡೆಸುತ್ತೇವೆ ಎಂದು ಬಿ.ಪುಟ್ಟಸ್ವಾಮಿ ಅಭಿಮಾನಿ ಬಳಗ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net