ರಾಜಕಾಲುವೆಯಲ್ಲಿ ನವಜಾತ ಶಿಶು ಮೃತದೇಹ ಪತ್ತೆ

crime
Published on

ಹಾಸನ: ನವಜಾತ ಶಿಶುವನ್ನು ನಿರ್ದಯಿ ತಾಯಿ ಬಿಸಾಡಿ ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ನಗರದ ಕುವೆಂಪು ನಗರದ ರಾಜಕಾಲುವೆಗೆ ನವಜಾತ ಹೆಣ್ಣು ಶಿಶುವನ್ನು ಎಸೆಯಲಾಗಿದೆ.

ರಾಜ ಕಾಲುವೆಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ಮಗು ಜನಿಸಿದ ಕೂಡಲೇ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಏಕೆಂದರೆ ನವಜಾತ ಶಿಶುವಿನ ಮೃತದೇಹದಲ್ಲೇ ಕರುಳ ಬಳ್ಳಿ ಇದೆ. ರಾಜ ಕಾಲುವೆಯಲ್ಲಿ ಹರಿಯುತ್ತಿರುವ ಕೊಳಚೆ ನೀರಿನಲ್ಲಿ ಮಗು ಮೃತದೇಹ ಪತ್ತೆಯಾಗಿದೆ. ಬಹುಶಃ ಹೆಣ್ಣು ಮಗು ಎಂಬ ಕಾರಣಕ್ಕೆ ಬಿಸಾಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net