ರಾಜಕಾಲುವೆ ಒತ್ತುವರಿ ತೆರವುಗೊಳಿಸಿ

parasuram
parasuram
Published on

ರಾಯಚೂರು ವಾರ್ಡ್ ನಂ.೧೫ರ ನೇತಾಜಿ ನಗರದಲ್ಲಿ ಹಾದು ಹೋಗಿರುವ ರಾಜ ಕಾಲುವೆ ಒತ್ತುವರಿಯನ್ನು ಪಾಲಿಕೆ ಅಽಕಾರಿಗಳು ತೆರವುಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ಸಂಘಟನಾ ಸಂಚಾಲಕ ಪರಶುರಾಮ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾರ್ಡ್ ನಂ.೧೫ ರಲ್ಲಿ ಅಂಬಾಭವಾನಿ ಹುಲಿಗೆಮ್ಮ ದೇವಿ ದೇವಸ್ಥಾನ ಮುಂಭಾಗದಿAದ ಹಾದು ಹೋಗಿರುವ ರಾಜ ಕಾಲುವೆ ಒತ್ತು ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿದ್ದಾರೆಂದು ದೂರಿದರು. ಒತ್ತುವರಿ ಕುರಿತು ಈ ಹಿಂದಿನ ನಗರಸಭೆ ಪೌರಾಯುಕ್ತರಿಗೆ ಸಾಕಷ್ಟು ಮನವಿ ಸಲ್ಲಿಸಲಾಗಿದೆ,

ಆದರೆ ಇದುವರೆಗೂ ಒತ್ತುವರಿ ತೆರವಿಗೆ ಮುಂದಾಗಿಲ್ಲ. ಕುಂದು ಕೊರತೆ ಸಭೆಯಲ್ಲಿಯೂ ಈ ಬಗ್ಗೆ ಪ್ರಸ್ಥಾಪಿಸಲಾಗಿದೆ, ತೆರವಿಗೆ ಭರವಸೆ ನೀಡಿದ್ದಾರೆ.ಹೊತರು ತೆರವುಗೊಳಿಸಲು ಮುಂದಾಗುತ್ತಿಲ್ಲವೆAದು ಆಪಾದಿಸಿದರು. ನಗರದ ಬಡಾವಣೆಗಳಲ್ಲಿ ಶೌಚಾಲಯದ ಕೊರತೆ ಇದ್ದು ನಿರ್ಮಾಣಕ್ಕೆ ಮುಂದಾಗಬೇಕು ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಹೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net