ರಾಜಕಾರಣಕ್ಕೆ ಸಿದ್ದರಾಮಯ್ಯ ಅಹಿಂದ ಬಳಕೆ: ಸಚಿವ ಕೆ.ಎಸ್. ಈಶ್ವರಪ್ಪ

Published on

ಪ್ರೇಮಿಗಳು ಯಾರು ಏನು ಬೇಕಾದ್ರು ಮಾಡಿಕೊಳ್ಳಬಹುದು ವ್ಯಾಲೆಂಟೇನ್ಸ್ ಡೇ ಅಚರಿಸುವುದು ತಪ್ಪಲ್ಲ ಪ್ರೇಮಿಗಳು ಬಹಿರಂಗವಾಗಿ ಸ್ವೇಚ್ಚಾಚಾರದ ಮನೋವ ಬೇಳೆಸುವುದು ಒಳ್ಳೆಯದಲ್ಲ, ತಂದೆ ತಾಯಿಗಳ ಬಗ್ಗೆ ಇರುವ ಗೌರವವನ್ನು ಬಿಡಬಾರದು ಅಷ್ಟೆ ಅವರ ಪ್ರತಿಷ್ಟೆ ಕಾಪಾಡಬೇಕು ಇನ್ನು ಫೆ.14 ತಂದೆ ತಾಯಿ ದಿನಾಚಾರಣೆ ಅಚರಿಸಬೇಕೆಂಬ ಸುದ್ದಿ ಒಳ್ಳೆಯದೇ ಅದರಿಂದ ದೇಶಕ್ಕೂ ಒಳ್ಳೆ ಹೆಸರು ಬರುತ್ತದೆ ಎಂದು ಹೇಳಿದರು

ಪುಲ್ವಾಮಾ ದಾಳಿ ವಿಚಾರದಲ್ಲಿ ಭಾರತ ದೇಶ ಶತ್ರು ರಾಷ್ಟ್ರಗಳಿಗೆ ತಕ್ಕ ಉತ್ತರ ನೀಡಿದೆ, ಈ ಹಿಂದೆ ಇದ್ದಂತಹ ಸರ್ಕಾರಗಳು ದಾಳಿ ನಡೆದಂತಹ ಸಂದರ್ಭದಲ್ಲಿ ಮೌನವಾಗಿದ್ದರಿಂದ ಉಗ್ರಗಾಮಿಗಳು ದೇಶದ ಗಡಿಗಳಲ್ಲಿ ಸೊಕ್ಕು ಹೆಚ್ಚಾಗಿ ದಾಳಿ ನಡೆಸುತ್ತಿದ್ದರು. ಆದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆ ಭ್ರಮೆಯನ್ನು ಕಳಚಿ ಉಗ್ರರಿಗೆ ತಕ್ಕ ಉತ್ತರ ನೀಡಿದ್ದೇವೆ. ಪುಲ್ವಾಮ ದಾಳಿ ನಂತರ ಪಾಕಿಸ್ತಾನದ ಉಗ್ರರು ಭಾರತದತ್ತ ಮುಖ ಮಾಡುತ್ತಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಬರಲಿ ಬಾರದಿರಲಿ ಸಮಾವೇಶ ಯಶಸ್ವಿ ಆದ ನಂತರ ಪಾದಯಾತ್ರೆ ಹಿಂದೆ ಆರೆಸ್ಸೆಸ್ ಇದೆ, ಪಾದಯಾತ್ರೆಗೆ ಆರೆಸ್ಸೆಸ್ ದುಡ್ಡು ಕೊಟ್ಟಿದೆ ಎಂದಾಗ ಮನಸ್ಸಿಗೆ ನೋವಾಯಿತು ಎಂದ ಅವರು, ಸಿದ್ದರಾಮಯ್ಯ ನೀಡಿರುವ ಹೇಳಿಕೆಗಳು ನಮಗೆ ಅಗತ್ಯವಿಲ್ಲ. ಕುರುಬರ ಎಸ್.ಸಿ ಹೋರಾಟ ಮಾತ್ರ ಮುಂದುವರೆಯಲಿದೆ ಎಂದು ನುಡಿದರು.

ಕುಟುಂಬ ಸಮೇತ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಿದ್ದ ವೇಳೆ ಕೋಲಾರ ನಗರ ಹೊರವಲಯದ ಕೊಂಡರಾಜನಹಳ್ಳಿ ಬಳಿ ಸುದ್ದಿಗಾರರ ಜತೆ ಮಾತನಾಡಿ,ಜಗದ್ಗುರುಗಳ ನೇತೃತ್ವದಲ್ಲಿ ನಾವೆಲ್ಲರೂ ಪ್ರಯತ್ನ ಮಾಡಿ ರಾಜ್ಯದ ಇತಿಹಾಸದಲ್ಲೇ ಹಿಂದೆಂದೂ ನಡೆಯದಿರುವಂತಹ ಸಮಾವೇಶ ಆಯಿತು. ಎಲ್ಲರೂ ಸಹಕಾರ ಕೊಡಬೇಕಿತ್ತು, ಹಾಗೆಯೇ ಸಿದ್ದರಾಮಯ್ಯ ಬರಬೇಕಿತ್ತು. ಯಾವ ಕಾರಣಕ್ಕೆ ಬರಲಿಲ್ಲ ಎಂದು ಗೊತ್ತಿಲ್ಲ ಎಂದರು.

ಕುರುಬರ ಎಸ್ಟಿ ಹೋರಾಟ ಕಾಗಿನಲೆ ಶ್ರೀ ನೇತೃತ್ವದಲ್ಲಿ ನಡೆಯುತ್ತಿದೆ ಅಹಿಂದವನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದು ಸಿದ್ದರಾಮಯ್ಯ ಸೇರಿ ಕಾಂಗ್ರೇಸ್ ಪಕ್ಷದವರು ಮೊದಲಿನಿಂದಲೂ ಮಾಡುತ್ತಾ ಬಂದಿದ್ದಾರೆ ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿ ಸಚಿವ ಈಶ್ವರಪ್ಪ ಹೇಳಿದರು.

ವಿಜಯವಾಣಿ ಸುದ್ದಿಜಾಲ ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net