ರಾಘವೇಶ್ವರ ಶ್ರೀಗಳಿಂದ ಪೂಜೆ

23gkn1-a-gokarna ashoke ganapa
Published on

ಗೋಕರ್ಣ: ಶ್ರೀರಾಮಚಂದ್ರಾಪುರ ಮಠದ ಮೂಲ ತಾಣ ಅಶೋಕೆಯಲ್ಲಿ ಚಾತುರ್ವಸ್ಯ ವ್ರಧಾರಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಚೌತಿ ನಿಮಿತ್ತ ಗಜಾನನನಿಗೆ ವಿಶೇಷ ಪೂಜೆ ಕೈಗೊಂಡರು. ಬಗೆ ಬಗೆಯ ನೈವೇದ್ಯದ ತರುವಾಯ ಶ್ರೀಗಳು ಮಹಾಮಂಗಳಾರತಿ ಕೈಗೊಂಡರು. ಶ್ರೀಮಠದ ಕಾರ್ಯಕರ್ತರು ಮತ್ತು ಶ್ರೀಗಳ ಪರಿವಾರ ಹೊರತು ಪಡಿಸಿ ಮಠದ ಭಕ್ತರು ಮತ್ತು ಶಿಷ್ಯರು ಹಬ್ಬದ ಆಚರಣೆಯಲ್ಲಿ ಭಾಗವಹಿಸಲಿಲ್ಲ.

ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರದಲ್ಲಿ ವರ್ಷದಂತೆ ನಾಲ್ಕು ದಿನದ ಬದಲು ಎರಡು ದಿನ ಹಬ್ಬ ಆಚರಿಸಲಾಯಿತು. ಪಶ್ಚಿಮ ದ್ವಾರದ ಓಲಗ ಮಂಟಪದಲ್ಲಿ ಸ್ಥಾಪಿಸಲಾದ ಗಣಪತಿಗೆ ವೇ. ಸಾಂಬ ಭಟ್ಟ ಷಡಕ್ಷರಿ ಪೂಜೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net