

ಅರಕಲಗೂಡು: ತಾಲೂಕಿನ ರಾಮನಾಥಪುರದ ಶ್ರೀ ರಾಘವೇಂದ್ರ ಉತ್ತರಾಧಿ ಮಠದಲ್ಲಿ ಬುಧವಾರ ಶ್ರೀ ರಾಘವೇಂದ್ರಸ್ವಾಮಿ ಪಟ್ಟಾಭಿಷೇಕ ಮಹೋತ್ಸವ, ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ 50ನೇ ವಧರ್ಂತಿ ಉತ್ಸವ ಜರುಗಿತು.ದೇವಸ್ಥಾನದಲ್ಲಿ ವಿವಿಧ ಪ್ರಜಾ ಕೈಂಕರ್ಯಗಳನ್ನು ನೆರವೇರಿಸಿದ ನಂತರ ಉತ್ಸವ ನಡೆಸಲಾಯಿತು. ಭಕ್ತರು ಶ್ರೀರಾಘವೇಂದ್ರ ಸ್ವಾಮಿ ಸ್ಮರಿಸಿ ಭಕ್ತಿ ಭಾವ ಸಮರ್ಪಿಸಿದರು.
ಪಂಡಿತ್ ಶ್ರೀ ಕಪಿಲಾಚಾರ್ಯ ಗಲಗಲಿ ಅವರು ಶ್ರೀ ಕೃಷ್ಣ ಚಾರಿತ್ರ್ಯ ಮಂಜೂರಿ ಉಪನ್ಯಾಸ ಹಾಗೂ ತತ್ವವಿವೇಕ ಪಾಠ ಪ್ರವಚನ ನೀಡಿದರು. ಧಾರವಾಡದ ಪಂಡಿತ್ ವಿ. ಕಪಿಲಾಚಾರ್ಯ, ಶ್ರೀ ವಿದ್ಯಾಧೀಶಾಚಾರ್ಯ ಗುತ್ತಲ, ರಾಘವೇಂದ್ರ ಉತ್ತರಾದಿ ಮಠದ ವ್ಯವಸ್ಥಾಪಕ ಶ್ರೀ ಕನಕಚಾರ್ಯ ಇತರರಿದ್ದರು.