ರಾಘವೇಂದ್ರರ ಆರಾಧನಾ ಮಹೋತ್ಸವ

58
Published on

ಮೈಸೂರು: ಶ್ರೀ ರಾಘವೇಂದ್ರಸ್ವಾಮಿಗಳ ಮಠ ಮತ್ತು ನಾಡಪ್ರಭು ಕೆಂಪೇಗೌಡರ ಯುವ ಬಳಗದ ಸಹಯೋಗದಲ್ಲಿ ಶ್ರೀರಾಘವೇಂದ್ರ ಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವ ಆಯೋಜಿಸಲಾಗಿತ್ತು.


ರಾಯರ ಬೆಳ್ಳಿ ರಥೋತ್ಸವಕ್ಕೆ ಶಾಸಕ ಕೆ.ಹರೀಶ್‌ಗೌಡ ಚಾಲನೆ ನೀಡಿದರು. ವೀರಗಾಸೆ, ವಾದ್ಯವೃಂದ, ಡೊಳ್ಳುಕುಣಿತ, ವಿದ್ಯುತ್ ದೀಪಗಳೊಂದಿಗೆ ರಾಯರ ಅದ್ದೂರಿ ರಥೋತ್ಸವವು ಕುಂಬಾರಕೊಪ್ಪಲು ಮುಖ್ಯ ಬೀದಿಗಳಲ್ಲಿ ಸಾಗಿತು. ಪಾಲಿಕೆ ಸದಸ್ಯ ಶ್ರೀನಿವಾಸ್, ಮುಖಂಡರಾದ ದೀಪಕ್‌ಗೌಡ, ಬಾಲು, ಚೇತನ್, ಮಧುಸೂದನ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net