ರಾಘವೇಂದ್ರ ಸ್ವಾಮಿಗಳ ಆರಾಧನೆ

w
Published on

ಧಾರವಾಡ: ನಗರದ ಮಾಳಮಡ್ಡಿಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ಆ. 31ರಿಂದ 2ರವರೆಗೆ ಏರ್ಪಡಿಸಲಾಗಿದೆ.
ಆ. 31ರಿಂದ ನಿತ್ಯ 3 ದಿನಗಳ ಕಾಲ ಬೆಳಗ್ಗೆ 6 ಗಂಟೆಗೆ ಪ್ರಾತಃ ಸ್ಮರಣೆ, ಪವಮಾನ ಹೋಮ, ವಾಯುಸ್ತುತಿ ಪುನಶ್ಚರಣ, 9 ಗಂಟೆಗೆ ಪಂಚಾಮೃತ ಅಭಿಷೇಕ, 11 ಗಂಟೆಗೆ ಅಲಂಕಾರ ಸೇವೆ, ಹಸ್ತೋದಕ, ಸಂಜೆ 5 ಗಂಟೆಗೆ ಭಜನೆ, ರಾತ್ರಿ 8 ಗಂಟೆಯಿಂದ ರಥೋತ್ಸವ, ಪಾಲಕಿ ಸೇವೆ, ಮಹಾಮಂಗಳಾರತಿ ಏರ್ಪಡಿಸಲಾಗಿದೆ.
ಆ. 31ರಂದು ಮನ್ಯುಸೂಕ್ತ ಹೋಮ, ಸೆ. 1ರಂದು ಶ್ರೀ ರಾಘವೇಂದ್ರ ಅಷ್ಟಾಕ್ಷರಿ ಹೋಮ, ಸೆ. 2ರಂದು ಪವಮಾನ ಹೋಮ ಮತ್ತು ಸತ್ಯನಾರಾಯಣ ಪೂಜೆ ನೆರವೇರಿಸಲಾಗುವುದು. ಇದಲ್ಲದೆ ಶ್ರೀ ಗುರುರಾಜರ ಪಾದಪೂಜೆಗೆ ಬೆಳಗ್ಗೆ 7.30ರಿಂದ 11ರವರೆಗೆ ಶ್ರೀ ಮಠದಲ್ಲಿ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಪಾಲ್ಗೊಳ್ಳಬಹುದು. ನಗರದ ಎಲ್ಲ ಭಕ್ತರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net